ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ : ವಿದ್ಯಾರ್ಥಿನಿಯರೊಂದಿಗೆ ಶಿಕ್ಷಕ ಅಸಭ್ಯವಾಗಿ ವರ್ತಿಸಿ ಕಿರುಕುಳ ನಿಡುತ್ತಿದ್ದಾನೆಂದು ವಿದ್ಯಾರ್ಥಿನಿಯ ಪಾಲಕರು ಹಾಗೂ ಗ್ರಾಮಸ್ಥರು ಶಿಕ್ಷಕನನ್ನು ಥಳಿಸಿರುವ ಘಟನೆ ತಾಲೂಕಿನ ಕೋಣನಕೇರಿ ಸರಕಾರಿ ಶಾಲೆಯಲ್ಲಿ ನಡೆದಿದೆ.
ಗ್ರಾಮದ ಸರಕಾರಿ ಶಾಲೆಯ ಶಿಕ್ಷಕನು ಹಲವಾರು ತಿಂಗಳಿನಿಂದ ವಿದ್ಯಾರ್ಥಿಯನಿಯರಿಗೆ ದಿನ ನಿತ್ಯ ಕಿರುಕುಳ ನಿಡುತ್ತಿದ್ದಾನೆಂದು ಪಾಲಕರು ಮುಖ್ಯೋಪ್ಯಾಧ್ಯಾಯರಿಗೆ ತಿಳಿಸಿದರು. ಶಿಕ್ಷಕನನ್ನು ತಾಲೂಕಿನ ಕಮತನೂರ ಶಾಲೆಗೆ ವರ್ಗಾವಣೆ ಮಾಡಿಲಾಗಿತ್ತು, ಆದರೂ ಮತ್ತೆ ಅದೇ ಶಾಲೆಗೆ ಮರು ಹಾಜರಾಗಿದ್ದಾನೆಂದು ಪಾಲಕರು ತಿಳಿಸಿದ್ದಾರೆ.
ಬುಧವಾರ ಸಭೆ ಆಯೋಜಿಸಲಾಗಿತ್ತು. ಈ ಸಭೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆಗಮಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಆ ಸಮದಲ್ಲಿ ಕಿರುಕುಳ ನೀಡುತ್ತಿದ್ದ ಜಿ.ಬಿ.ಬಾಯನ್ನವರ ಶಿಕ್ಷಕನನ್ನು ವಿಚಾರಿಸಿದಾಗ ತಪ್ಪು ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಇದರಿಂದ ಕುಪಿತಗೊಂಡ ಪಾಲಕರು ನಮ್ಮ ಹೆಣ್ಣುಮಕ್ಕಳು ವಿದ್ಯಾವಂತರಾಗಲಿ ಎಂದು ಶಾಲೆಗೆ ಕಳುಹಿಸಿದರೆ ಅವರಿಗೆ ಕಿರುಕುಳ ನೀಡುತ್ತಿಯಾ ಎಂದು ಶಿಕ್ಷಕನನ್ನು ಥಳಿಸಲು ಪ್ರಾರಂಭಿಸಿದರು.
ಶಿಕ್ಷಣಾಧಿಕಾರಿ ಶಿಕ್ಷಕನ್ನು ರಕ್ಷಿಸುವುದಕ್ಕಾಗಿ ತನ್ನ ಕಾರಿನೊಳಗೆ ಕುಳಿತುಕೊಳ್ಳುವಂತೆ ಶಿಕ್ಷಕನಿಗೆ ತಿಳಿಸಿದ್ದಾರೆ, ಶಿಕ್ಷಕನ ಮೇಲೆ ಕಾನೂನಿನ ಕ್ರಮ ಜರುಗಿಸುವುದನ್ನು ಬಿಟ್ಟು ಅವರನ್ನು ರಕ್ಷಣೆ ಮಾಡುತ್ತಿರೆಂದು ಪಾಲಕರು ಹಾಗೂ ಶಿಕ್ಷಣಾಧಿಕಾರಿಗಳ ನಡುವೇ ಮಾತಿನ ಚಕಮಕಿ ನಡೆಯಿತು. ಆಕ್ರೋಶಗೊಂಡ ಗ್ರಾಮಸ್ಥರು ಕಾರಿನ ಗ್ಲಾಸ್ ಗಳನ್ನು ಒಡೆದ್ದಿದ್ದಾರೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ಶಿಕ್ಷಕನ್ನು ಅಮಾನತು ಮಾಡಬೇಕು ಎಂದು ಪಟ್ಟು ಹಿಡಿದಾಗ ಚಿಕ್ಕೋಡಿ ಡಿಡಿಪಿಐ ಅವರಿಗೆ ತಿಳಿಸಿ ಸೂಕ್ತ ಕ್ರಮಜರುಗಿಸಲು ತಿಳಿಸಲಾಗುವುದೆಂದು ಹೇಳಿದಾಗ ಸಾರ್ವಜನಿಕರು ಸಮಾಧನರಾರೆಂದು ತಿಳಿದುಬಂದಿದೆ.
ಹುಕ್ಕೇರಿ ತಾಲೂಕಿನ ಕೋಣನಕೇರಿ ಸರಕಾರಿ ಶಾಲೆಯ ಶಿಕ್ಷಕ ಜಿ.ಬಿ.ಬಾಯನ್ನವರ, ತಪ್ಪಾಗಿದೆ ಎಂದು ಕ್ಷಮೆ ಯಾಚಿಸುತ್ತಿರುವುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ