Kannada NewsKarnataka News

ನಿರ್ಗತಿಕರಿಗೆ ದಿನಸಿ, ಆಹಾರ ಪದಾರ್ಥ ವಿತರಣೆ

 ಉಗರಗೋಳ(ತಾ.ಸವದತ್ತಿ) –  ಕರೋನಾ ಮಾಹಾಮಾರಿಯಿಂದ ಬಡ ಕುಟುಂಬಗಳು ಕುಟುಂಬ ನಿರ್ವಹಣೆಗೆ ಪರಿತಪಿಸುತ್ತಿವೆ. ಇಂಥ ಕುಟುಂಬಗಳಿಗೆ ತಕ್ಕಮಟ್ಟಿಗಾದರೂ ನೆರವಾಗಲು ಶ್ರಮಿಸುತ್ತಿದ್ದೇವೆ ಎಂದು ಗೋಕಾಕ ತಾಲೂಕಿನ ಕುಂದರಗಿಯ ಶ್ರೀ ಅಡವಿಸಿದ್ದೇಶ್ವರಮಠದ ಶ್ರೀ ಅಮರಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದ ಕುಷ್ಠರೋಗಿಗಳ ಕಾಲನಿಯಲ್ಲಿ ಶ್ರೀ ಅಡವಿಸಿದ್ದೇಶ್ವರ ಧರ್ಮವಾಹಿನಿ ವತಿಯಿಂದ ಶುಕ್ರವಾರ ಮುನವಳ್ಳಿಯ ಶ್ರೀ ಸೋಮಶೇಖರಮಠದ ಶ್ರೀ ಮ.ನಿ.ಪ್ರ. ಮುರುಘೇಂದ್ರ ಮಹಾಸ್ವಾಮಿಗಳ ೪೭ ನೇ ಜನುಮ ದಿನದ ಪ್ರಯಕ್ತ ಕುಂದರಗಿಯ ಅಮರಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ  ನಿರ್ಗತಿಕರಿಗೆ ರೇಷನ್ ಹಾಗೂ ಆಹಾರ ಕಿಟ್, ಹಾಸಿಗೆ, ಹೊದಿಕೆ ಮತ್ತು ಬಟ್ಟೆಗಳು ಹಾಗೂ ನೀರಿನ ಬಾಟಲ್ ವಿತರಿಸಿ ಮಾತನಾಡಿದjg.

ಲಾಕ್‌ಡೌನ್‌ದಿಂದ ಸಂಕಷ್ಟದಲ್ಲಿರುವ ಬಡ ಕುಟುಂಬಗಳು ಸೇರಿದಂತೆ ನಿರ್ಗತಿಕರನ್ನು ಗುರುತಿಸಿ ಕುಂದರಗಿಯ ಶ್ರೀ ಅಡವಿಸಿದ್ದೇಶ್ವರ ಧರ್ಮವಾಹಿನಿ ಸಾಕಷ್ಟು ಸಹಾಯ ಸಹಕಾರ, ಸಮಾಜ ಸೇವೆಯನ್ನು ಮಾಡುತ್ತಿದೆ.  ಪ್ರತಿಯೊಬ್ಬರೂ ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲೇ ಉಳಿದು, ಕರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಪ್ರಯತ್ನಿಸಬೇಕು ಎಂದರು.

ಕಾಮಿಡಿ ಕಿಲಾಡಿ ಖ್ಯಾತಿಯ ಸಂಜು ಬಸಯ್ಯ, ಪ್ರಜಾರಿ ಗೋವಿಂದ ಚುಳಕಿ, ಮಹೇಂದ್ರ ಪತ್ತಾರ, ರಾಜು ದಾಸಗೋಳ, ವಿನೋದ ಅಂಕಲಗಿ, ವಿಜಯ ಚರಲಿಂಗಮಠ, ಪ್ರಜ್ವಲ್ ಅಷ್ಟಗಿಮಠ, ಬಿ.ಬಿ.ಹುಲಿಗೊಪ್ಪ, ಶ್ರೀಶೈಲ ಹಿರೇಮಠ ಹಾಗೂ ಮಠದ ಭಕ್ತರು ಇದ್ದರು.

ರಾಜ್ಯದ ಪಾಲಿಗೆ ಶುಭ ಸುದ್ದಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button