Kannada NewsKarnataka News

ಜೊಲ್ಲೆ ಉದ್ಯೋಗ ಸಮೂಹ ಯಕ್ಸಂಬಾದಿಂದ ಸಾವಿರ ಛತ್ರಿ ವಿತರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:  ಶ್ರೀನಗರದಲ್ಲಿರುವ ಜಿಲ್ಲಾ ಬಾಲ ಭವನದಲ್ಲಿ ಜೊಲ್ಲೆ ಉದ್ಯೋಗ ಸಮೂಹ ಯಕ್ಸಾಂಬಾ ವತಿಯಿಂದ ಇಂದು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆರಿಗೆ ಒಂದು ಸಾವಿರ ಛತ್ರಿ ವಿತರಿಸುವ ಕಾರ್ಯಕ್ರಮ ಜರುಗಿತು.

ಈ ವೇಳೆ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ಛತ್ರಿ ವಿತರಿಸಿ ಮಾತನಾಡಿದ ಮಾಜಿ ಸಚಿವ ಶಶಿಕಾಂತ ನಾಯಕ, ಭಾರತ‌ವೂ ಹಳ್ಳಿಗಳ ದೇಶವಾಗಿದ್ದರಿಂದ ಕೊರೊನಾ ತಡೆಗೆ ದೇಶದಲ್ಲಿ ಮತ್ತಷ್ಟು ಸಹಕಾರಿಯಾಗಿದೆ. ಅಮೇರಿಕಾ ಸೇರಿದಂತೆ ಇತರ ರಾಷ್ಟ್ರಗಳಿಗೆ ಹೊಲಿಸಿದರೆ ನಮ್ಮ ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಕಡಿಮೆ‌ ಪ್ರಮಾಣದಲ್ಲಿರುವುದು ಸಮಾಧಾನಕರ ಸಂಗತಿ. ಇನ್ನು ಗ್ರಾಮೀಣ ಪ್ರದೇಶದಲ್ಲಿನ ಜನರಿಗೆ ಕೊರೊನಾ ವೈರಸ್ ತಡೆಗೆ ಸಾಕಷ್ಟು ಶ್ರಮವಹಿಸಿ ಜಾಗೃತಿ ಮೂಡಿಸುತ್ತಿರುವ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತಯರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಇದಲ್ಲದೇ ಕೊರೊನಾ ತಡೆಗೆ ಪ್ರತಿ ಮನೆ ಮನೆಗೂ ತೆರಳಿ ತಪಾಸಣೆ ನಡೆಸುವ ಮೂಲಕ ತಮ್ಮ ಜೀವದ ಹಂಗು‌ ತೊರೆದು ಕಾರ್ಯನಿರ್ವಹಿಸುತ್ತಿರೋ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ವಿಮೆ ಯೋಜನೆ ಜಾರಿ ಹಾಗೂ ಸೇವಾ ಭದ್ರತೆ ಒದಗಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಸಿಡಿಪಿಒ  ರೇವತಿ ಹೋಸಮಠ, ಡಾ.ರಾಜೇಶ ನೇರ್ತಿ, ರವಿ ಹಿರೇಮಠ, ಸದಾನಂದ ಕಲಾರಕೊಪ್ಪ, ಅಶೋಕ ದಾನವಾಡೆ, ಡಾ.ಸಿದ್ದಾರ್ಥ ಪೂಜೇರಿ, ಮೋಹನ ಕೊಟೀವಾಲೆ ಹಾಗೂ ಜೊಲ್ಲೆ ಉದ್ಯೋಗ ಸಮೂಹದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button