*”ಎನ್.ಎಫ್.ಎಸ್.ಎ”-“ಅನ್ನಭಾಗ್ಯ ಯೋಜನೆ”ಯಡಿ ಪಡಿತರ ಚೀಟಿ ಫಲಾನುಭವಿಗಳಿಗೆ ಆಹಾರಧಾನ್ಯ ವಿತರಣೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: “ಎನ್.ಎಫ್.ಎಸ್.ಎ” ಹಾಗೂ “ಅನ್ನಭಾಗ್ಯ ಯೋಜನೆ”ಯಡಿ ಬಿಡುಗಡೆಯಾದ ಆಹಾರಧಾನ್ಯವನ್ನು “ಮಾರ್ಚ-2025” ಮಾಹೆಯಲ್ಲಿ ಪಡಿತರ ಚೀಟಿ ಫಲಾನುಭವಿಗಳಿಗೆ ಸಾರ್ವಜನಿಕ ವಿತರಣಾ ಪದ್ಧತಿಯಡಿ ಪಡಿತರ ವಿತರಣೆ ಮಾಡಲಾಗುತ್ತಿದೆ.
ಸರಕಾರದ ಆದೇಶದಂತೆ ಫೆಬ್ರುವರಿ-2025ನೇ ಮಾಹೆಯಿಂದ ಪಡಿತರ ಚೀಟಿ ಫಲಾನುಭವಿಗಳಿಗೆ ಜಮೆ ಮಾಡಬೇಕಾದ ರೂ.170ಡಿ.ಬಿ.ಟಿ ಮೊತ್ತದ ಬದಲಾಗಿ, ಮಾರ್ಚ-2025ನೇ ಮಾಹೆಯಲ್ಲಿ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿಯನ್ನು ವಿತರಿಸಲಾಗುತ್ತಿದೆ.
ಅಂತ್ಯೋದಯ(ಎಎವೈ), ಪಿ.ಎಚ್.ಎಚ್ (ಬಿಪಿಎಲ್) (ಆದ್ಯತಾ), ಫೆಬ್ರುವರಿ ಮತ್ತು ಮಾರ್ಚ 2025ರ ಮಾಹೆ ಸೇರಿ ವಿತರಿಸಲಾಗುವುದು. (Portability) ಅಂತರ್‌ರಾಜ್ಯ ಪೋರ್ಟೆಬಿಲಿಟಿ ಮೂಲಕ ಪಡಿತರ ಪಡೆಯುವವರಿಗೆ ಕೇಂದ್ರ ಸರ್ಕಾರದ ಪಡಿತರ ವಿತರಣಾ ಪ್ರಮಾಣ (5 ಕೆ.ಜಿ ಪ್ರತಿ ಸದಸ್ಯರಿಗೆ) ಮತ್ತು ದರ (ಪ್ರತಿ ಕೆ.ಜಿ ಗೆ ರೂ.3 ರಂತೆ) ಅನ್ವಯಿಸುತ್ತದೆ.
ಜಿಲ್ಲೆಯಲ್ಲಿ 67,908 ಅಂತ್ಯೋದಯ, 10,78,166 ಬಿಪಿಎಲ್ ಹಾಗೂ 3,26,507 ಎಪಿಎಲ್ ಪಡಿತರ ಚೀಟಿಗಳು ಸೇರಿ ಒಟ್ಟು 14,72,581 ಪಡಿತರ ಚೀಟಿಗಳು ಚಾಲ್ತಿಯಲ್ಲಿರುತ್ತವೆ.
ಮಾರ್ಚ್ ಮಾಹೆ 1ನೇ ತಾರೀಖಿನಿಂದ ತಿಂಗಳ ಕೊನೆಯವರೆಗೆ ಬೆಳಿಗ್ಗೆ 7 ರಿಂದ ರಾತ್ರಿ 8 ಗಂಟೆಯವರೆಗೆ ಬಾಕಿ ಉಳಿದಿರುವ ಪಡಿತರ ಚೀಟಿಯಲ್ಲಿನ ಸದಸ್ಯರುಗಳು ಇ-ಕೆವೈಸಿ ಮಾಡುವ ಹಾಗೂ ಪಡಿತರ ವಿತರಣೆ ಕಾರ್ಯ ಜರುಗಲಿದ್ದು, ಕಾರಣ ಪಡಿತರ ಚೀಟಿದಾರರು ಬಯೋ ನೀಡಿದ ತಕ್ಷಣವೇ ಪಡಿತರ ಪಡೆಯಲು ತಿಳಿಸಿದೆ.
ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರು ಯಾವುದೇ ಶುಲ್ಕ ನೀಡುವಂತಿಲ್ಲ.ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ಪಡಿತರ ಚೀಟಿಯನ್ನು ರದ್ದುಪಡಿಸಲು ಕ್ರಮವಹಿಸಲಾಗುವುದು.
ಕಾಳಸಂತೆಯಲ್ಲಿ ಅನಧಿಕೃತವಾಗಿ ಆಹಾರಧಾನ್ಯವನ್ನು ದಾಸ್ತಾನು/ಸಾಗಾಣಿಕೆ ಮಾಡುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ-1955 ರಡಿ ಕ್ರಮ ಜರುಗಿಸಲಾಗುವುದು.
ಪಡಿತರ ವಿತರಣೆ ಕುರಿತು ಏನಾದರೂ ದೂರುಗಳು ಇದ್ದಲ್ಲಿ, ಸಂಬಂಧಿಸಿದ ತಹಶೀಲ್ದಾರ ಕಚೇರಿ ಅಥವಾ ಉಪ ನಿರ್ದೇಶಕರ ಕಚೇರಿ ಆಹಾರ ಇಲಾಖೆ ಬೆಳಗಾವಿ ಇವರಿಗೆ ದೂರು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.