Kannada News

ಉಚಿತ ಪಠ್ಯ ಪುಸ್ತಕಗಳ ವಿತರಣೆ

ಉಚಿತ ಪಠ್ಯ ಪುಸ್ತಕಗಳ ವಿತರಣೆ

೧೦ ಬಡ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಬಡವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಮಾಡಿದ ಕಾಲೇಜು ಸಿಬ್ಬಂದಿ ಅವರಲ್ಲಿ ಇನ್ನಷ್ಟು ಓದಲು ಹುರಿದುಂಬಿಸಿದರು.

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಇತ್ತಿಚಿಗೆ ಬೆಳಗಾವಿಯ ಎಸ್. ಎಸ್. ಎಸ್. ಸಮಿತಿಯ ಜಗದೀಶ ಎ. ಸವದತ್ತಿ ಪದವಿಪೂರ್ವ ವಾಣಿಜ್ಯ ವಿದ್ಯಾಲಯದಲ್ಲಿ ಪಿ. ಯು. ಸಿ. ಪ್ರಥಮ ವರ್ಷದ ೧೦ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕಗಳನ್ನು ವಿತರಿಸಲಾಯಿತು.

ಹುಬ್ಬಳ್ಳಿಯ ಪ್ರೊ. ಉದಯ ಲವಾಟೆ ಅವರು ಈ ವಿದ್ಯಾರ್ಥಿಗಳಿಗೆ ಹೊಸ ಪುಸ್ತಕ ಕೊಂಡು ಕೊಟ್ಟು ವಿದ್ಯಾರ್ಥಿಗಳಿಗೆ ಓದಲು ಅನೂಕೂಲ ಮಾಡಿಕೊಟ್ಟರು. ಪ್ರಾಂಶುಪಾಲರಾದ ತುರಮರಿ ಯವರು ಮಾತನಾಡಿ ವಿದ್ಯಾರ್ಥಿಗಳು ಈ ಪುಸ್ತಕಗಳ ಸದುಪಯೋಗ ಪಡೆಯುವದರ ಜೊತೆಗೆ ಗ್ರಂಥಾಲಯದ ಉಪಯೋಗವನ್ನು ಪಡೆಯಬೇಕು ಮತ್ತು ಪ್ರತಿನಿತ್ಯ ಗ್ರಂಥಾಲಯಕ್ಕೆ ಭೇಟಿ ನೀಡಿ ಹೊಸ ಹೊಸ ವಿಷಯಗಳ ಅಧ್ಯಯನ ಮಾಡಬೇಕು ಎಂದು ಹೇಳಿದರು. ಡಾ. ಭರತ ಭೀ ಅಲಸಂದಿ, ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.//

Web Title : Distribution of free text books – Pragati Vahini

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button