
ಪ್ರಗತಿವಾಹಿನಿ ಸುದ್ದಿ, ಸವದತ್ತಿ – ಮುನವಳ್ಳಿ ಹಾಗೂ ಯರಗಟ್ಟಿ ಗ್ರಾಮದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಪರವಾಗಿ ಮುಸ್ಲಿಂ ಸಮಾಜದ ಬಡವರಿಗೆ ರಂಜಾನ್ ಹಬ್ಬದ ನಿಮಿತ್ತ ದಿನಸಿ ಕಿಟ್ ಗಳನ್ನು ವಿತರಿಸಿದರು.

ಈ ಭಾಗದ ಯುವ ಕಾಂಗ್ರೆಸ್ ಮುಖಂಡ ಅಲ್ತಾಫ್ ಮುಲ್ಲಾ, ವೈದ್ಯರಾದ ಬಸೀರ್ ಅಹ್ಮದ್ ಬೈರೆಕದಾರ್, ಪುರಸಭೆ ಸದಸ್ಯ ಪರುಶರಾಮ ಗಂಟಿ, ಅಬ್ಬು ಬಿಜಲಿಖಾನ್, ಸಲೀಂ ಜಮಾದಾರ ಹಾಗೂ ಮುನವಳ್ಳಿ ಮತ್ತು ಯರಗಟ್ಟಿ ಯುತ್ ಕಾಂಗ್ರೆಸ್ ನ ಯುವಕರು ರೇಷನ್ ಕಿಟ್ ಗಳನ್ನು ವಿತರಿಸುವ ಕಾರ್ಯದಲ್ಲಿ ನೆರವಾದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ