
ಬೆಳಗಾವಿ ಗ್ರಾಮೀಣ ಕ್ಷೇತ್ರದ 10 ಗ್ರಾಮ, ಶಾಲೆಗಳಿಗೆ ಜಿಮ್ ಹಾಗೂ ಕ್ರೀಡಾ ಸಾಮಗ್ರಿ ವಿತರಣೆ
Distribution of gym and sports equipment to 10 villages and schools of Belagavi Rural Constituency

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರ ಶಾಸಕರ ನಿಧಿಯಿಂದ ಬೆಳಗಾವಿ ಗ್ರಾಮೀಣ ಕ್ಷೇತ್ರದ 10 ಗ್ರಾಮಗಳು ಮತ್ತು ಶಾಲೆಗಳಿಗೆ ಬುಧವಾರ ಜಿಮ್ ಉಪಕರಣ ಮತ್ತು ಕ್ರೀಡಾ ಸಾಮಗ್ರಿಗಳನ್ನು ವಿತರಿಸಲಾಯಿತು.


ಮಕ್ಕಳು ಹಾಗೂ ಯುವಕರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಮುಖ್ಯ. ಹಾಗಾಗಿ ಗ್ರಾಮಗಳಲ್ಲಿ ವ್ಯಾಯಾಮ ಶಾಲೆ, ಕ್ರೀಡಾ ಚಟುವಟಿಕೆ ಉತ್ತೇಜಿಸಲು ಕ್ರೀಡಾ ಸಾಮಗ್ರಿ ಒದಗಿಸಲಾಗುತ್ತಿದೆ. ಇಡೀ ಕ್ಷೇತ್ರ ಸಮಗ್ರವಾಗಿ ಅಭಿವೃದ್ಧಿಯಾಗಬೇಕು. ಕ್ಷೇತ್ರದ ಜನರು ಆರೋಗ್ಯವಂತರಾಗಿರಬೇಕು ಎನ್ನುವುದೇ ಇದರ ಹಿಂದಿನ ಧ್ಯೇಯ ಎಂದು ಅವರು ತಿಳಿಸಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳಗಾ (ಯು), ಸುಳಗಾ ( ವೈ), ಬಿಜಗರಣಿ, ಬಾಳೇಕುಂದ್ರಿ ಕೆ ಎಚ್, ಸಾಂಬ್ರಾ, ಕುಕಡೊಳ್ಳಿ, ಸುಳೇಭಾವಿ, ಅತ್ತವಾಡ ಹಾಗೂ ತುರಮರಿ ಗ್ರಾಮಗಳಿಗೆ ಶಾಸಕರ ಅನುದಾನದಲ್ಲಿ ಸಾರ್ವಜನಿಕ ಜಿಮ್ ಸಾಮಾನುಗಳನ್ನು ಆಯಾ ಗ್ರಾಮಗಳ ಮುಖಂಡರ, ಜನ ಪ್ರತಿನಿಧಿಗಳ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.

ಈ ಸಮಯದಲ್ಲಿ ಆಯಾ ಗ್ರಾಮಗಳ ಹಿರಿಯರು, ಮುಖಂಡರು, ಜನಪ್ರತಿನಿಧಿಗಳು, ಗಂಗಣ್ಣ ಕಲ್ಲೂರ, ಯುವರಾಜ ಕದಂ, ನಾಗೇಶ ದೇಸಾಯಿ, ಮನೋಹರ್ ಬೆಳಗಾಂವ್ಕರ್, ಮಹೇಶ ಸುಗ್ನೆಣ್ಣವರ, ಇಸ್ಮಾಯಿಲ್ ಅತ್ತಾರ, ಸಾತೇರಿ ಬೆಳವಟ್ಕರ್, ಬಸವರಾಜ ಮ್ಯಾಗೋಟಿ, ಅರವಿಂದ ಪಾಟೀಲ, ರಘುನಾಥ ಖಂಡೇಕರ್, ಕಲ್ಲಪ್ಪ ರಾಮಚನ್ನವರ, ಬಾಗಣ್ಣ ನರೋಟಿ, ನಿಲೇಶ ಚಂದಗಡ್ಕರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.
https://pragativahini.com/co-operative-society-secretarysuicideshivamogga/
