
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಾಯುವ್ಯ ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯ ಹಣಮಂತ ಆರ್. ನಿರಾಣಿ ಎಸ್ಎಸ್ಎಲ್ ಸಿ ಮೌಲ್ಯಮಾಪನ ಮಾಡುತ್ತಿರುವ ಶಿಕ್ಷಕರಿಗೆ ಸೆನಿಟೈಸರ್ ಬಾಟಲಿಗಳನ್ನು ವಿತರಿಸಿದರು.
ಬೆಳಗಾವಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಲ್ಲ ಮೌಲ್ಯ ಮಾಪನ ಕೇಂದ್ರದಲ್ಲಿ ಪ್ರತಿಯೊಬ್ಬ ಮೌಲ್ಯ ಮಾಪಕ ಶಿಕ್ಷಕರಿಗೆ ಒಟ್ಟು ಸುಮಾರು 4500 ಸ್ಯಾನಿಟೈಸರ್ ಬಾಟಲ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಇಲಾಖೆಯ ನಿರ್ದೇಶಕ ಪ್ರಸನ್ನ ಕುಮಾರ, ಬೆಳಗಾವಿ ಉಪನಿರ್ದೇಶಕ ಎ.ಬಿ.ಪುಂಡಲಿಕ, ಶಿಕ್ಷಣಾಧಿಕಾರಗಳಾದ ಬೆಳ್ಳಣ್ಣವರ, ಶಿಕ್ಷಕ ಸಂಘದ ರಾಜ್ಯದ ಉಪಾಧ್ಯಕ್ಷ ರಾಮು ಗುಗವಾಡ, ಜಿಲ್ಲಾ ಶಿಕ್ಷಕ ಸಂಘದ ಅಧ್ಯಕ್ಷರುಗಳಾದ ಎಸ್.ಎಸ್. ಬಳಿಗಾರ, ಏಕನಾಥ ಪಾಟೀಲ, ಬಿ.ಬಿ ನಾವಲಗಟ್ಟಿ, ಬಿಜೆಪಿ ಯುವ ದುರೀಣರಾದ ರಾಜು ಚಿಕ್ಕನಗೌಡರ, ಬಿಜೆಪಿ ಜಿಲ್ಲಾ ವಕ್ತಾರ ಹಣುಮಂತ ಕೊಂಗಾಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ