ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ಮರು ಹಂಚಿಕೆ ಮಾಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ.
ಅಚ್ಛರಿ ಎಂದರೆ, ಸಚಿವ ರಮೇಶ ಜಾರಕಿಹೊಳಿಗೆ ಯಾವುದೇ ಜಿಲ್ಲೆಯ ಉಸ್ತುವಾರಿ ನೀಡಲಾಗಿಲ್ಲ. ಧಾರವಾಡ ಜಿಲ್ಲೆಯ ಪ್ರಭಾರ ಜೊತೆಗೆ ಬೆಳಗಾವಿ ಜಿಲ್ಲೆಗೆ ಜಗದೀಶ ಶೆಟ್ಟರ್ ಅವರೇ ಉಸ್ತುವಾರಿಯಾಗಿ ಮುಂದುವರಿಯಲಿದ್ದಾರೆ.
ಶಶಿಕಲಾ ಜೊಲ್ಲೆಗೆ ಉತ್ತರ ಕನ್ನಡದ ಬದಲು ವಿಜಯಪುರ ನೀಡಲಾಗಿದ್ದು, ಉತ್ತರ ಕನ್ನಡಕ್ಕೆ ಶಿವರಾಮ ಹೆಬ್ಬಾರ ಉಸ್ತುವಾರಿಯಾಗಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉಳಿಸಿಕೊಂಡಿದ್ದಾರೆ. ಅಶ್ವತ್ಥ ನಾರಾಯಣ ಅವರಿಗೆ ರಾಮನಗರ ಜಿಲ್ಲೆ ನೀಡಲಾಗಿದೆ. ಲಕ್ಷ್ಮಣ ಸವದಿಗೆ ರಾಯಚೂರು, ಗೋವಿಂದ ಕಾರಜೋಳ ಅವರಿಗೆ ಬಾಗಲಕೋಟೆ ಜೊತೆಗೆ ಕಲಬುರಗಿ ಜಿಲ್ಲೆ ನೀಡಲಾಗಿದೆ.
ಈಶ್ವರಪ್ಪಗೆ ಶಿವಮೊಗ್ಗ, ಆರ್.ಅಶೋಕ್ ಗೆ ಬೆಂಗಳೂರು ಗ್ರಾಮಾಂತರ, ಶ್ರೀರಾಮುಲುಗೆ ಚಿತ್ರದುರ್ಗ, ಸುರೇಶ ಕುಮಾರಗೆ ಚಾಮರಾಜ ನಗರ, ಸೋಮಣ್ಣಗೆ ಕೊಡಗು ಜಿಲ್ಲೆ ನೀಡಲಾಗಿದೆ.
ಸಿ.ಟಿ.ರವಿಗೆ ಚಿಕ್ಕಮಗಳೂರು, ಬಸವರಾಜ ಬೊಮ್ಮಾಯಿಗೆ ಹಾವೇರಿ ಹಾಗೂ ಉಡುಪಿ, ಕೋಟಾ ಶ್ರೀನಿವಾಸ ಪೂಜಾರಿಗೆ ದಕ್ಷಿಣ ಕನ್ನಡ, ಮಾಧುಸ್ವಾಮಿಗೆ ತುಮಕೂರು ಹಾಗೂ ಹಾಸನ, ಸಿ.ಸಿ.ಪಾಟೀಲಗೆ ಗದಗ, ನಾಗೇಶ್ ಗೆ ಕೋಲಾರ, ಪ್ರಭು ಚವ್ಹಾಣ್ ಗೆ ಬೀದರ್ ಹಾಗೂ ಯಾದಗಿರಿ ನೀಡಲಾಗಿದೆ.
ಸೋಮಶೇಖರಗೆ ಮೈಸೂರು, ಸುಧಾಕರಗೆ ಚಿಕ್ಕಬಳ್ಳಾಪುರ, ನಾರಾಯಣ ಗೌಡಗೆ ಮಂಡ್ಯ, ಆನಂದ ಸಿಂಗ್ ಗೆ ಬಳ್ಳಾರಿ, ಬೈರತಿ ಬಸವರಾಜಗೆ ದಾವಣಗೇರೆ ಹಾಗೂ ಬಿ.ಸಿ.ಪಾಟೀಲಗೆ ಕೊಪ್ಪಳ ಜಿಲ್ಲೆ ನೀಡಲಾಗಿದೆ.
ಒಂದೆರಡು ದಿನದಲ್ಲೇ ಸಚಿವರ ಉಸ್ತುವಾರಿ ಬದಲಾವಣೆ -ಯಡಿಯೂರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ