Belagavi NewsBelgaum News

*ಜ.8 ರಿಂದ ಜಿಲ್ಲಾ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಅಂಚೆ ಚೀಟಿಗಳ ಮಹತ್ವ ಹಾಗೂ ಇತಿಹಾಸ ತಿಳಿಸುವ ಮಹತ್ವಾಕಾಂಕ್ಷೆಯೊಂದಿಗೆ ಜನೇವರಿ 8 ರಿಂದ 10 ರವರೆಗೆ ಮೂರು ದಿನಗಳ ಕಾಲ ಜಿಲ್ಲಾ ಮಟ್ಟದ ಅಂಚೆ ಚೀಟಿಗಳ ಪ್ರದರ್ಶನವನ್ನು ನಗರದ ಮಹಾವೀರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಅಂಚೆ ಅಧೀಕ್ಷಕರಾದ ವಿಜಯ ವಾದೋನಿ ಅವರು ತಿಳಿಸಿದರು.

ವಾರ್ತಾ ಭವನದ ಸಭಾಂಗಣದಲ್ಲಿ ಇಂದು ಜರುಗಿದ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿ ಅಂಚೆ ವಿಭಾಗದ ವತಿಯಿಂದ ಮೂರು ದಿನಗಳ ಕಾಲ ಜರುಗಲಿರುವ ಅಂಚೆ ಚೀಟಿ ಪ್ರದರ್ಶನವನ್ನು ವಿಶೇಷವಾಗಿ ಶಾಲಾ ಮಕ್ಕಳಿಗಾಗಿ ಅಯೋಜಿಸಲಾಗಿದೆ. ಅಂಚೆ ಚೀಟಿಗಳ ಮಹತ್ವ ಹಾಗೂ ಅದರ ಇತಿಹಾಸದ ಪರಿಚಯವನ್ನು ಈ ಪ್ರದರ್ಶನದಲ್ಲಿ ಮಕ್ಕಳಿಗೆ ತಿಳಿಸಲಾಗುವುದು ಎಂದರು.

ಈರಣ್ಣ ಮುತ್ನಾಳ ಅವರು ಮಾತನಾಡಿ ಈ ಬಾರಿಯ ಅಂಚೆ ಚೀಟಿ ಪ್ರದರ್ಶನವನ್ನು ಇಕ್ಷುಪೆಕ್ಸ್ ಎಂಬ ಹೆಸರಿನಲ್ಲಿ ಆಯೋಜಿಸಲಾಗುತ್ತಿದೆ. ಇಕ್ಷು ಎಂಬುದು ಸಂಸ್ಕೃತಿ ಪದವಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಹೆಚ್ಚಾಗಿ ಬೆಳೆಯುತ್ತಿರುವುದರಿಂದ ಇಕ್ಷುಪೆಕ್ಸ್ ఎంబ ಹೆಸರಿನ ಮೂಲಕ ಮೂರು ದಿನಗಳ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ.

ಮೂರು ದಿನಗಳ ಕಾಲ ಜರುಗಲಿರುವ ಈ ಪ್ರದರ್ಶನದಲ್ಲಿ ವಿದೇಶಿ ಅಂಚೆ ಚೀಟಿಗಳನ್ನು ಸಹ ಪ್ರದರ್ಶಿಸಲಾಗುವುದು. ಪ್ರತಿಯೊಂದು ಅಂಚೆ ಚೀಟಿ ಅದರದೆ ಆದಂತಹ ವಿಶೇಷತೆಯನ್ನು ಹೊಂದಿದೆ. ಅಂಚೆ ಚೀಟಿಗಳ ವಿಶೇಷತೆಯನ್ನು ಶಾಲಾ ಮಕ್ಕಳಿಗೆ ತಿಳಿಸುವುದೇ ಮುಖ್ಯ ಉದ್ದೇಶವಾಗಿದ್ದು, ಇದೇ ಸಂದರ್ಭದಲ್ಲಿ ವಿಶೇಷ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಎಂ.ಬಿ.ಶಿರೂರ ಅವರು ಮಾತನಾಡಿ ಇಂದಿನ ಪೀಳಿಗೆಗೆ ಅಂಚೆ ಚೀಟಿ ಹಾಗೂ ಅದರ ಸಂಗ್ರಹದ ಮಹತ್ವ ತಿಳಿಸುವದು ಈ ಪ್ರದರ್ಶನದ ಉದ್ದೇಶ. ಮೂರು ದಿನಗಳ ಕಾಲ ಜರುಗುವ ಈ ಪ್ರದರ್ಶನದಲ್ಲಿ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು, ಕಾರ್ಯಾಗಾರಗಳನ್ನಯ ಆಯೋಜಿಸಲಾಗುವುದು ಎಂದು ವಿಜಯ ವಾದೋನಿ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಅಂಚೆ ಅಧೀಕ್ಷಕರಾದ ಈರಣ್ಣಾ ಮುತ್ನಾಳಿ, ಅಂಚೆ ನಿರೀಕ್ಷಕರಾದ ಮಹಾದೇವ ಶಿರೂರ ಅವರುಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button