Wanted Tailor2
Cancer Hospital 2
Bottom Add. 3

ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ವಿವಿಧ ಪ್ರಶಸ್ತಿ ಪ್ರಕಟ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನವು ೨೦೨೩ ನೇ ಸಾಲಿನ ಸಿರಿಗನ್ನಡ ಗೌರವ ಮತ್ತು ೨೦೨೨ ನೇ ಸಾಲಿನ ಸಿರಿಗನ್ನಡ ಪುಸ್ತಕ ಪ್ರಶಸ್ತಿಯನ್ನು ಪ್ರಕಟಿಸಿದೆ.
ಸಿರಿಗನ್ನಡ ಗೌರವ ಪ್ರಶಸ್ತಿಗೆ ಶ್ರೀ ವಿ ಎನ್ ಗೋಡಖಿಂಡಿ. ಶಿಕ್ಷಣ ತಜ್ಷರು, ರಾಮದುರ್ಗ ಮತ್ತು ಪ್ರೋ. ವಿ ಎನ್ ಜೋಶಿ ಶಿಕ್ಷಣ ತಜ್ಞರು, ಬೆಳಗಾವಿ ಇವರು ಭಾಜನರಾಗಿದ್ದಾರೆ.
ಸಿರಿಗನ್ನಡ ಪುಸ್ತಕ ಪ್ರಶಸ್ತಿಗೆ ಶ್ರೀ ಎಲ್ ಎಸ್ ಶಾಸ್ತ್ರಿ ಅವರ ವೈಚಾರಿಕ ಲೇಖನ ಸಂಗ್ರಹ ಯಕ್ಷಗಾನ ರಂಗ ಪ್ರಜ್ಞೆ ಕೃತಿ ಮತ್ತು ಶ್ರೀ ಸುರೇಶ ದೇಸಾಯಿ ಅವರ ಲೇಖನ ಸಂಗ್ರಹ ರಾಮದುರ್ಗ ಸಂಪದ ಕೃತಿ ಆಯ್ಕೆಯಾಗಿರುತ್ತದೆ.
ವಿವಿಧ ಜೀವಮಾನ ಸಾಧನೆ ಪ್ರಶಸ್ತಿಗಳು:
ಪ್ರೋ ಪ್ರಲ್ಹಾದಕುಮಾರ ಬಾಗೋಜಿ ದತ್ತಿ ಪ್ರಶಸ್ತಿಗೆ ಲೇಖಕರ ಜೀವಮಾನ ಸಾಧನೆಗಾಗಿ ಅಪ್ಪಾಸಾಹೇಬ ಸದರಜೋಶಿ, ಡಾ ಲತಾ ಗುತ್ತಿ ದತ್ತಿ ನಿಧಿ ಪ್ರಶಸ್ತಿಗೆ ಲೇಖಕಿಯರ ಜೀವಮಾನ ಸಾಧನೆಗಾಗಿ ಶ್ರೀಮತಿ ದೀಪಿಕಾ ಚಾಟೆ, ದಿ ಸುಮನ ಗುರುನಾಥ ಹುದಲಿ ದತ್ತಿ ನಿಧಿ ಪ್ರಶಸ್ತಿ ಸಾಮಾಜಿಕ ಮತ್ತು ಸಹಕಾರಿ ಕ್ಷೇತ್ರದ ಸಾಧನೆಗಾಗಿ ಶ್ರೀಮತಿ ಪ್ರೀಯಾ ಆನಂದ ಪುರಾಣಿಕ, ದಿ, ವೆಂ ಲ. ಜೋಶಿ ಸ್ಮಾರಕ ದತ್ತಿ ಪ್ರಶಸ್ತಿಗೆ ಶ್ರೀಮತಿ ಹಮೀದಾಬೇಗಮ್ ದೇಸಾಯಿ(ಪ್ರೌಢಶಾಲಾ ವಿಭಾಗ), ತಾರಾಮತಿ ಪರ್ವತರಾಜ ಪಾಟೀಲ ದತ್ತಿ ಪ್ರಶಸ್ತಿ ಜಿಲ್ಲೆಯ ಉತ್ತಮ ಪ್ರಕಾಶನ ಸಂಸ್ಥೆ ವಿನುತಶ್ರೇಯ ಪ್ರಕಾಶನ, ಬೆಳಗಾವಿ, ಸಂಗೀತ ಪ್ರತಿಷ್ಠಾನ ಬೆಳಗಾವಿಯ ದತ್ತಿ ನಿಧಿಯ ವೇಣುಗಾನ ಸಂಗೀತ ಪ್ರಶಸ್ತಿ ಪಂಡಿತ ರಾಜಪ್ರಭು ಧೋತ್ರೆ ಇವರಿಗೆ ನೀಡಲಾಗಿದೆ.
ವಿವಿಧ ದತ್ತಿನಿಧಿ ಪುಸ್ತಕ ಪ್ರಶಸ್ತಿಗಳು:
ಶ್ರೀ ಕೆ ಚಂದ್ರಮೌಳಿ ದತ್ತಿನಿಧಿ ಪ್ರಶಸ್ತಿ ಶ್ರೀಮತಿ ಸುನಂದಾ ಮುಳೆ ಅವರ ಪ್ರವಾಸ ಕಥನ ಆಸ್ಸಾಂನಲ್ಲಿ ಕನ್ನಡ ಕವಯಿತ್ರಿಯರ ಕಲರವ ಕೃತಿಗೆ, ಪಿ. ವಿಜಯಕುಮಾರ ದತ್ತಿ ಪ್ರಶಸ್ತಿ ಶಿಶು ಸಾಹಿತ್ಯಕ್ಕೆ – ಶ್ರೀ ಬಸವರಾಜ ಗಾರ್ಗಿ ಅವರ ಹಾಸ್ಟೇಲ್ ಮಕ್ಕಳ ಕಥೆಗಳು ಕೃತಿಗೆ, ದಿ. ಶ್ರೀದೇವಿ ದಾಸಪ್ಪ ಶಾನಬಾಗ ಸ್ಮಾರಕ ದತ್ತಿ ಪ್ರಶಸ್ತಿ ಶ್ರೀ ಎ.ಎ. ಸನದಿ ಅವರ ಅನುವಾದ ಸಾಹಿತ್ಯ ಮನುಷ್ಯರದೇನೂ ಗ್ಯಾರಂಟಿ ಇಲ್ಲ ಕೃತಿಗೆ, ಡಾ ಹಣಮಂತರಾವ ಸವಣೂರ ಸ್ಮಾರಕ ದತ್ತಿ ಪ್ರಶಸ್ತಿಗೆ ಶ್ರೀಮತಿ ಸುನಂದಾ ಹಾಲಬಾವಿ ಅವರ ಕಥಾ ಸಂಕಲನ ಕಿಂಡಿ ತೂರಿ ಬಂತು ಕಿರಣ ಕೃತಿಗೆ, ಶ್ರೀ ಎಸ್ ಎಮ್ ಕುಲಕರ್ಣಿ ಷಷ್ಠಬ್ಧಿ ಸಮಿತಿ ದತ್ತಿ ನಿಧಿ ಪ್ರಶಸ್ತಿ ಡಾ ಪಿ ಜಿ ಕೆಂಪಣ್ಣವರ ಅವರ ಅವಲೋಕನ ಕೃತಿಗೆ, ದಿ. ಚಂದ್ರವ್ವ ಧರ್ಮಾಜಿ ಅನಗೋಳ ಸ್ಮಾರಕ ದತ್ತಿ ಪ್ರಶಸ್ತಿ ಶ್ರೀಮತಿ ನೀರಜಾ ಗಣಾಚಾರಿ ಅವರ ಅಂಕಣ ಬರಹ ನಿನಾಗ ಕಾಲಂ ಕೃತಿಗೆ, ಡಾ ಎಮ್ ಎಲ್ ತುಕ್ಕಾರ ಅಭಿನಂದನ ಸಮಿತಿ ದತ್ತಿ ಪ್ರಶಸ್ತಿ ಶ್ರೀ ಯ ರು ಪಾಟೀಲ ಅವರ ನಾಟಕ ಸಂಕಲನ ಸ್ವಾತಂತ್ರ್ಯ ಯೋಧೆ ಮಂಟೂರು ಸೀತಾಬಾಯಿ ಕೃತಿಗೆ, ಶಿವಕವಿ ಉಳವೀಶ ಹುಲೆಪ್ಪನವರಮಠ ಸ್ಮಾರಕ ದತ್ತಿ ನಿಧಿ ಪ್ರಶಸ್ತಿ ಗಝಲ್ ಸಾಹಿತ್ಯ – ಶ್ರೀಮತಿ ಶಮಾ ಜಮಾದಾರ ಅವರ ನೆಂದ ನೆಲದ ಘಮಲು ಕೃತಿಗೆ, ಶ್ರೀ ಅಪ್ಪಾಸಾಹೇಬ ಸದರಜೋಶಿ ಕುಟುಂಬದ ದತ್ತಿ ಪ್ರಶಸ್ತಿ ವೈಚಾರಿಕ ಲೇಖನಗಳು ಶ್ರೀ ಸಾ ರಾ ಸುಳಕೂಡೆ ಅವರ ಸಹಜತೆ ನಿರಾಳತೆ ಕೃತಿಗೆ, ದಿ. ರಾಮರಾವ ಶಿರಹಟ್ಟಿ ದತ್ತಿ ಪ್ರಶಸ್ತಿ ಜಿಲ್ಲೆಯ ಲೇಖಕರ ಪ್ರಥಮ ಉತ್ತಮ ಕೃತಿಗೆ ಶ್ರೀಮತಿ ಸುಮಾ ಕಾಟ್ಕರ್ ಅವರ ಮಾಧವರಾವ್ ಕೌಶಿಕ ಕವಿತೆಗಳು ಕೃತಿಗೆ, ದಿ. ಭಾರತಿಬಾಯಿ ಬಾಳಕೃಷ್ಣ ಜೋಶಿ ಸ್ಮರಣಾರ್ಥ ಪರಿಮಳ ಪುರಸ್ಕಾರ ಉತ್ತಮ ಜೀವನ ಚರಿತ್ರೆಗೆ ಶ್ರೀ ಬಿ ಎಸ್ ಗವಿಮಠ ಅವರ ಕನ್ನಡರತ್ನ ಡಾ. ಪ್ರಭಾಕರ ಕೋರೆ ಕೃತಿಗೆ ನೀಡಲಾಗಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀಮತಿ ನೀರಜಾ ಗಣಾಚಾರಿ ಪ್ರಟಣೆಯಲ್ಲಿ ತಿಳಿಸಿದ್ದಾರೆ.
೨೦೨೨ ನೇ ಸಾಲಿನ ಪುಸ್ತಕಗಳನ್ನು ಶ್ರೀ ಪ್ರಭಾಕರ ಜೋಶಿ. ಕಲಬುರ್ಗಿ, ಡಾ ಜಿ ಕೆ ಹಿರೇಮಠ ನಿಡಸೋಸಿ ಮತ್ತು ಡಾ ಬಸವರಾಜ ಜಗಜಂಪಿ, ಬೆಳಗಾವಿ ಅವರು ಮೌಲ್ಯಮಾಪನ ಮಾಡಿರುತ್ತಾರೆ. ಎಲ್ಲ ಪ್ರಶಸ್ತಿಗೆ ಭಾಜನರಾದ ಮಹನೀಯರಿಗೆ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಸ್ ಎಮ್ ಕುಲಕರ್ಣಿಯವರು ಅಭಿನಂದಿಸಿ, ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕ ನಿಗದಿಯಾದ ಮೇಲೆ ತಿಳಿಸಲಾಗುತ್ತದೆ.

Bottom Add3
Bottom Ad 2

You cannot copy content of this page