Latest

ಖ್ಯಾತ ಕಿರುತೆರೆ ನಟಿ ಮೇಲೆ ಪತಿಯಿಂದ ಹಲ್ಲೆ, ಕಿರುಕುಳ; ಆಸ್ಪತ್ರೆಗೆ ದಾಖಲು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕನ್ನಡ ಹಾಗೂ ತಮಿಳು ಚಿತ್ರರಂಗದ ಖ್ಯಾತ ನಟಿ ದಿವ್ಯಾ ಶ್ರೀಧರ್, ಪತಿಯ ವಿರುದ್ಧ ಹಲ್ಲೆ ಹಾಗೂ ಕಿರುಕುಳ ಆರೋಪ ಮಾಡಿದ್ದು ಪತಿ ತನಗೆ ವಂಚಿಸಿದ್ದಾರೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ದಿವ್ಯಾ ಶ್ರೀಧರ್ ಕನ್ನಡದ ಆಕಾಶ ದೀಪ, ಸೇವಂತಿ ಸೇರಿದಂತೆ ಹಲವು ಧಾರಾವಾಹಿ ಹಾಗೂ ಪಲ್ಲಕ್ಕಿ, ವಿಚಿತ್ರ ಪ್ರೇಮಿ, ಸನಿಹ ಸೇರಿದತೆ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ತಮಿಳು ಕಿರುತೆರೆಯಲ್ಲಿ ಭಾರಿ ಜನಪ್ರಿಯ ನಟಿಯಾಗಿರುವ ದಿವ್ಯಾ ಶ್ರೀಧರ್, ಮಹಾರಸಿ, ಕಣ್ಮಣಿ, ಕೆಳದಿ ಕಣ್ಮಣಿ ಸೇರಿದಂತೆ ಹಲವು ಸೀರಿಯಲ್ ಮೂಲಕ ಮನೆಮಾತಾಗಿದ್ದಾರೆ. ಕೆಳದಿ ಕಣ್ಮಣಿ ಧಾರಾವಾಹಿಯ ಸಹನಟ ಅರ್ನವ್ ನನ್ನು ಪ್ರೀತಿಸಿ 2017ರಲ್ಲಿ ದಿವ್ಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಅವರ ದಾಂಪತ್ಯ ಜೀವನದಲ್ಲಿ ಬೀರುಗಾಳಿ ಬೀಸಿದ್ದು, ಅರ್ನವ್ ತನ್ನ ಗರ್ಭಿಣಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

2017ರಲ್ಲಿಯೇ ಅರ್ನವ್ ಹಾಗೂ ತಾನು ವಿವಾಹವಾಗಿದ್ದು, ವಿವಾಹದ ಬಳಿಕ ಚೆನ್ನೈನಲ್ಲಿ ವಾಸವಾಗಿದ್ದೇವೆ. ಆದರೆ ವಿವಾಹವಾದ ವಿಚಾರವನ್ನು ಯಾರಿಗೂ ಬಹಿರಂಗಪಡಿಸದಂತೆ ಅರ್ನವ್ ತನಗೆ ಬೆದರಿಕೆ ಹಾಕುತ್ತಿದ್ದಾನೆ. ಅಲ್ಲದೇ ತಾನೀಗ ಗರ್ಭಿಣಿಯಾಗಿದ್ದು, ಮಗು ಹಾಗೂ ತನ್ನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಅರ್ವನ್ ತನ್ನ ಮೇಲೆ ಹಲ್ಲೆ ನಡೆಸುತ್ತಿದ್ದು, ಕಿರುಕುಳ ನೀಡುತ್ತಿದ್ದುದಾಗಿ ದಿವ್ಯಾ ದೂರಿದ್ದಾರೆ.

ಮದುವೆ ವಿಚಾರ ಮುಚ್ಚಿಡುವಂತೆ ಅರ್ನವ್ ದಿವ್ಯಾಳಿಗೆ ತಾಕೀತು ಮಾಡುತ್ತಿದ್ದ. ಗರ್ಭಿಣಿಯಾಗಿರುವ ದಿವ್ಯಾ ಈ ವಿಚಾರವನ್ನು ತನ್ನ ಸ್ನೇಹಿತೆಯರಿಗೆ ತಿಳಿಸಿದ್ದಾರೆ. ಇದರಿಂದ ಪತ್ನಿ ಗರ್ಭಿಣಿ ಎಂಬುದನ್ನೂ ನೀಡದೇ ಅರ್ನವ್ ಹಲ್ಲೆ ನಡೆಸಿದ್ದು, ದಿವ್ಯಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ದಿವ್ಯಾ ಪರ ವಕೀಲರು ತಿಳಿಸಿದ್ದಾರೆ. ಅರ್ವನ್ ವಿರುದ್ಧ ಮತಾಂತರ ಆರೋಪ ಕೂಡ ಕೇಳಿಬಂದಿದ್ದು, ಇದು ಲವ್ ಜಿಹಾದ್ ಎಂಬ ಆಕ್ರೋಶ ಕೂಡ ವ್ಯಕ್ತವಾಗಿದೆ.

ಲಲಿತ್ ಅಶೋಕ್ ನಲ್ಲಿ ವಿಶಿಷ್ಟ ಕಲಾಕೃತಿ, ಆಭರಣಗಳ ಪ್ರದರ್ಶನ

https://pragati.taskdun.com/latest/the-lalit-ashokexhibitionhi-life/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button