ಪ್ರಗತಿವಾಹಿನಿ ಸುದ್ದಿ, ರಾಣೆಬೆನ್ನೂರು– ರಾಣೇಬೆನ್ನೂರು ನಗರದ ಅಂಧರ ಜೀವ ಬೆಳಕು ಸಂಸ್ಥೆಯ
ಅಂಧ ವಿದ್ಯಾರ್ಥಿನಿ ಗೌರಮ್ಮ ಬಾರಕೇರ ಇಲ್ಲಿನ ಸರಕಾರಿ ಪದವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಇತ್ತೀಚಿಗೆ ಜರುಗಿದ ಪದವಿ ಪರೀಕ್ಷೆಯಲ್ಲಿ ಶೇ.80 ಅಂಕ ಗಳಿಸಿ ಉತ್ತಮ ಸಾಧನೆ ಮಾಡಿದ್ದಾಳೆ.
ಮೂಲತಃ ಬೀಳಗಿ ತಾಲೂಕು ಯರಕಲ್ ನವಳಾದ ಈ ವಿದ್ಯಾರ್ಥಿನಿ ಈಚೆಗೆ ತನ್ನ ತಾಯಿಯನ್ನೂ ಕಳೆದುಕೊಂಡಿದ್ದಾಳೆ. ಓದಿನಲ್ಲಿ ತುಂಬಾ ಆಸಕ್ತಿ ಹೊಂದಿರುವ ಈಕೆ ಆರ್ಥಿಕವಾಗಿ ಕಷ್ಟದಲ್ಲಿದ್ದಾಳೆ. ಪ್ರಸ್ತುತ ಕರ್ನಾಟಕ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ (ಎಂಎ) ಸಮಾಜಶಾಸ್ತ್ರ ವಿಭಾಗಕ್ಕೆ ಪ್ರವೇಶ ಪಡೆದುಕೊಂಡಿದ್ದಾಳೆ.
ಧಾರವಾಡದ ಅಕ್ಕಮಹಾದೇವಿ ವಸತಿನಿಲಯಕ್ಕೆ ಗೌರಮ್ಮ ಆಯ್ಕೆಯಾಗಿದ್ದು ಅದರ ದಾಖಲಾತಿಗಾಗಿ 20,000 ರೂಪಾಯಿ ತುಂಬಬೇಕಿದೆ. ಆದರೆ ಈ ಹಣವನ್ನು ಕಟ್ಟಲು ಆಕೆಯಿಂದ ಸಾಧ್ಯವಾಗುತ್ತಿಲ್ಲ. ಡಿಸೆಂಬರ್ 30 ಹಾಸ್ಟೆಲ್ ಪ್ರವೇಶಕ್ಕೆ ಅಂತಿಮ ದಿನ. ಹಾಗಾಗಿ ಆರ್ಥಿಕ ನೆರವು ನೀಡಿ ತನ್ನ ಬಾಳಿನಲ್ಲಿ ಬೆಳಕಾಗುವಂತೆ ವಿದ್ಯಾರ್ಥಿನಿ ವಿನಂತಿಸಿಕೊಂಡಿದ್ದಾಳೆ.
ನೆರವು ನೀಡಲು ಖಾತೆ ನಂ.: 0568108039967, ಹೆಸರು – Naganagowda D. Belolli, ಕೆನರಾ ಬ್ಯಾಂಕ್, ರಾಣೇಬೆನ್ನೂರ ಶಾಖೆ, IFSC: CNRB0000568.
ಹೆಚ್ಚಿನ ಮಾಹಿತಿಗೆ ಗೌರಿ ಅವರ ಪೊ.ನಂ. 9891378951.
ರಾಣೇಬೆನ್ನೂರು ಅಂಧರ ಜೀವ ಬೆಳಕು ಸಂಸ್ಥೆಯ ನಾಗನಗೌಡ ಅವರ ನಂಬರ್ – 9535951112.
ಪ್ರಗತಿವಾಹಿನಿ ವಾಟ್ಸಪ್ ನಂಬರ್ – 8197712235.
( ಈ ಸುದ್ದಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ