ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಬಂಧಿಸಲಾಗಿರುವ ಸಚಿವ ಶ್ರೀರಾಮುಲು ಆಪ್ತ ರಾಜಣ್ಣ ಮೊಬೈಲ್ ವಶಪಡಿಸಿಕೊಳ್ಳಲಾಗಿದ್ದು, ಆಡಿಯೋ ರೆಕಾರ್ಡ್ಸ್ ಗಳು ಸಿಕ್ಕಿವೆ.
ತಮ್ಮ ಹೆಸರು ಸೇರಿದಂತೆ ಹಲವು ಪ್ರಮುಖರ ಹೆಸರು ಹೇಳಿ ರಾಜಣ್ಣ ಹಲವರಿಗೆ ವಂಚಿಸಿದ್ದಾರೆ ಎಂದು ವಿಜಯೇಂದ್ರ ದೂರು ನೀಡಿದ್ದರು. ನಿನ್ನೆ ರಾತ್ರಿ ರಾಜಣ್ಣ ಅವರನ್ನು ಬಂಧಿಸಲಾಗಿದೆ.
ರಾಜಣ್ಣ ಬಂಧನಕ್ಕೆ ಸಚಿವ ಶ್ರೀರಾಮುಲು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮಗೆ ತಿಳಿಸಿದ್ದರೆ ತಾವೇ ಕ್ರಮ ಕೈಗೊಳ್ಳುತ್ತಿದ್ದುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳ ಜೊತೆಗೆ ಈ ಕುರಿತು ಮಾತನಾಡುವುದಾಗಿ ಹೇಳಿದ್ದಾರೆ. ಈ ಪ್ರಕರಣ ಬಿಜೆಪಿಯಲ್ಲೀಗ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ.
3 ಕೋಟಿಗೆ ಡೀಲ್
ಸಿಕ್ಕಿರುವ 3 ಆಡಿಯೋ ರೆಕಾರ್ಡ್ಸ್ ಪ್ರಕಾರ ರಾಜಣ್ಣ ಗುತ್ತಿಗೆದಾರರೊಬ್ಬರೊಂದಿಗೆ ಡೀಲ್ ಕುದುರಿಸಿದ್ದಾರೆ. ವಿಜಯೇಂದ್ರಗೆ ಹಣ ತಲುಪಿಸಬೇಕೆಂದು ಹೇಳಿ ಮೊದಲು 75 ಲಕ್ಷ ರೂ., ನಂತರ 1 ಕೋಟಿ ರೂ. ಹಾಗೂ ಅಂತಿಮವಾಗಿ 3 ಕೋಟಿ ರೂ.ಗೆ ಡೀಲ್ ಕುದುರಿಸಿದ್ದಾರೆ.
ಪ್ರಕರಣ ಕುರಿತು ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ. ಇಂತಹ ಇನ್ನೂ ಹಲವು ಪ್ರಕರಣಗಳು ತನಿಖೆ ವೇಳೆ ಬಹಿರಂಗವಾಗಬಹುದೆನ್ನಲಾಗಿದೆ.
ವಿಜಯೇಂದ್ರ ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ರಾಜಣ್ಣ ಬಂಧನ ಪ್ರಕರಣ; ಬಿ.ವೈ.ವಿಜಯೇಂದ್ರ ಸ್ಪಷ್ಟನೆ
ಎಲ್ಲಿಯೋ ಮಿಸ್ ಕಮ್ಯೂನಿಕೇಷನ್ ಆಗಿದೆ – ಶ್ರೀರಾಮುಲು ಆಕ್ರೋಶ
ಕೋಲಾಹಲ ಎಬ್ಬಿಸಿದ ಆಪ್ತನ ಬಂಧನ; ವಿಜಯೇಂದ್ರ ನಡೆಗೆ ಶ್ರೀರಾಮುಲು ಅಸಮಾಧಾನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ