ನಾಗರ ಪಂಚಮಿ ಹಬ್ಬ ಆಚರಣೆ ಬಂದಿದ್ದು ಹೇಗೆ ಗೊತ್ತೆ?
ನಾಗರ ಪಂಚಮಿಯು ನಾಡಿಗೆ ದೊಡ್ಡ ಹಬ್ಬವಾಗಿದೆ.
ಈ ಹಬ್ಬವು ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿವಸದಂದು ಬರುತ್ತದೆ. ಈ ಪಂಚಮಿ ಹಬ್ಬವನ್ನು ನಾಡಿನಾದ್ಯoತ ಆಚರಿಸುತ್ತಾರೆ. ಕರ್ನಾಟಕದಲ್ಲಿ ಈ ಹಬ್ಬವನ್ನು ತುಂಬಾ ಭಕ್ತಿಯಿಂದ ಆಚರಿಸುತ್ತಾರೆ. ಇದು ಎಲ್ಲಾ ವರ್ಗದ ಜನರಿಗೂ ವರ್ಷದ ಪ್ರಾರಂಭಿಕ ಹಬ್ಬವಾಗಿದೆ.
ಇದನ್ನೂ ಓದಿ – ನಾಗರ ಪೂಜೆಗೆ ಶುಭ ಸಮಯ ಯಾವುದು?
ಈ ಹಬ್ಬದ ಆಚರಣೆ ನಂತರ ಪ್ರತಿ ತಿಂಗಳು ಒಂದರ ಹಿಂದೆ ಒಂದರಂತೆ ಸಾಲು ಸಾಲಾಗಿ ಹಬ್ಬಗಳು ಬರುತ್ತದೆ. ರಕ್ಷಾ ಬಂಧನ, ಕೃಷ್ಣಾಷ್ಟಮಿ, ಗಣೇಶ ಚತುರ್ಥಿ, ದಸರಾ, ದೀಪಾವಳಿ ಹೀಗೆ ಹತ್ತು ಹಲವಾರು ಹಬ್ಬಗಳು ಬರುತ್ತದೆ.
ಕರ್ನಾಟಕದಲ್ಲಿ ಹಿಂದುಗಳು ಈ ಹಬ್ಬದ ಆಚರಣೆಯನ್ನು ಮಾಡುವ ವಿಧಾನಗಳು: ಸ್ನಾನ ಮಾಡಿ ಮಡಿಬಟ್ಟೆಯನ್ನು ತೊಟ್ಟ ನಂತರ ನಾಗಪ್ಪನಿಗೆ ಹಾಲನ್ನು ಎರೆದು ಪೂಜಿಸುತ್ತಾರೆ. ಅದು ಕಲ್ಲಿನ ನಾಗರಿರಲಿ ಅಥವಾ ಬೆಳ್ಳಿಯ ನಾಗಪ್ಪನ ವಿಗ್ರಹವಿರಲಿ. ಇನ್ನು ಕೆಲವರು ನಿಜವಾದ ನಾಗಪ್ಪನ ತಂದು ಹಾಲೆರೆದು ಪೂಜಿಸುತ್ತಾರೆ. ಈ ನಾಗಪ್ಪನ ಹಬ್ಬದ ನೈವೇಧ್ಯವನ್ನು ಒಂದೊಂದು ಕಡೆ ಒಂದೊಂದು ತೆರನಾಗಿ ಮಾಡುತ್ತಾರೆ.
ಹಲವು ಕಡೆಗೆ ಉಪ್ಪನ್ನು ಹಾಕದೆ ಸಪ್ಪೆಯಾದ ಅಕ್ಕಿ ರೊಟ್ಟಿಯನ್ನು ಮಾಡುತ್ತಾರೆ. ಇನ್ನು ಕೆಲವು ಕಡೆ ಎಲ್ಲ ಕಾಳುಗಳನ್ನು ಹಾಕಿ ಸಿಹಿಯಾದ ಪೊಂಗಲ್ ಮಾಡಿ ನಾಗಪ್ಪನಿಗೆ ತೋರಿಸುತ್ತಾರೆ. ಇನ್ನು ಕೆಲವು ಕಡೆಗಳಲ್ಲಿ ಈ ಹಬ್ಬವನ್ನು ನಾಗಪ್ಪನ ಗುಡಿಯನ್ನು ಕಟ್ಟಿಸಿ ಪ್ರತಿಷ್ಠಾಪನೆಯನ್ನು ಸಂಕಲ್ಪ ಮಾಡಿಕೊಂಡು ಮಾಡುತ್ತಾರೆ.
ಹಲವಾರು ವರ್ಷಗಳಿಂದ ಮಗು ಪಡೆಯದ ದಂಪತಿಗಳು ನಾಗಪ್ಪನ ವಿಗ್ರಹವನ್ನು ಪ್ರತಿಷ್ಠಾಪಿಸಿ ನಾಗಪ್ಪನನ್ನು ಆರಾಧಿಸುತ್ತಾರೆ. ಸಂತಾನ ಭಾಗ್ಯವನ್ನು ಪಡೆದಿರುವ ಮನೆಗಳಿಗೆ ಹೋಗಿ ತಾವು ಆ ದಿವಸ ಉಪವಾಸವಿದ್ದು ಅಕ್ಕಿ, ತೆಂಗಿನ ಕಾಯಿ ಮತ್ತು ಎಲ್ಲಾ ಪೂಜಾ ಸಾಮಗ್ರಿಗಳನ್ನು ಅಂತಹ ಮನೆಗಳಿಗೆ ಕೊಟ್ಟು ಆ ಪೂಜಾ ಪ್ರಸಾದವನ್ನು ಪಡೆದು ಊಟವನ್ನು ಮಾಡುತ್ತಾರೆ. ಈ ಒಂದು ನಂಬಿಕೆಯಿoದ ಹಲವಾರು ದಂಪತಿಗಳು ಸಂತಾನ ಭಾಗ್ಯವನ್ನು ಪಡೆದ ಬಗ್ಗೆಯೂ ಈ ಹಬ್ಬಕ್ಕೆ ಪ್ರತಿಕಥೆ ಬೆಸೆದು ಕೊಂಡಿದೆ.
ಪುರಾಣದಲ್ಲಿ ಹೇಳಿದ ಹಾಗೇ ಈ ಹಬ್ಬವು ಅಣ್ಣ, ತಂಗಿಯರ, ಹಬ್ಬವಾಗಿದೆ. ಸಹೋದರಿಯೊಬ್ಬಳು ತನ್ನ ಸಹೋದರನಿಗೆ ಹಾವು ಕಡಿದು ಸಾವನ್ನಪ್ಪುವ ಸಂದರ್ಭದಲ್ಲಿ ತನ್ನ ಭಕ್ತಿಯ ಪೂಜೆಯಿಂದ ಸಹೋದರನನ್ನು ಬದುಕಿಸಿಕೊಂಡ ಉಲ್ಲೇಖವು ಈ ಪಂಚಮಿ ಹಬ್ಬದ ಮಹತ್ವದ್ಧಾಗಿದೆ.
ಪುರಾಣ ಉಲ್ಲೇಖದ ಪ್ರಕಾರ ಜನಮೇಜಯ ರಾಜನು ತನ್ನ ತಂದೆಯಾದ ಪರೀಕ್ಷಿತ ರಾಜನ ಸಾವಿಗೆ ನಾಗರ ಹಾವೇ ಮೂಲ ಕಾರಣರಣವೆಂದು ಭೂ ಲೋಕದಲ್ಲಿ ಇರುವಂತಹ ಎಲ್ಲಾ ಸರ್ಪ ಸಂಕುಲಗಳನ್ನು ಸಾಯಿಸಿ ನಾಷಪಡಿಸುವ ಶಪಥವನ್ನು ಮಾಡಿ ಸರ್ಪ ಯಜ್ಞಕ್ಕೆ ಮುಂದಾಗಿದ್ದ ಪ್ರತೀಕವಿದೆ.
ಮುಂದೆ ಹಿರಿಯ ವಿದ್ವಾoಸರುಗಳು ಅವರಿಗೆ ಈ ಪ್ರಾಣಿ ಹಿಂಸೆಯಿಂದ ಮಹಾ ಪಾಪ ಮಾಡಿ ಪಾಪಕೂಪದಲ್ಲಿ ಬೀಳದಿರು ಎಂದು ತಿಳುವಳಿಕೆ ನೀಡಿದಂತೆ ಸರ್ಪ ಯಜ್ಞ ಮಾಡುವ ಪೂರ್ವಯೋಜಿತ ಶಪಥವನ್ನು ಕೈಬಿಟ್ಟಿರುವ ಪುಣ್ಯದಿನವೂ ಇದಾಗಿದೆ. ಹೀಗೆ ಹಲವಾರು ಕಾರಣಗಳಿಂದ ನಾಗ ಪಂಚಮಿ ಆಚರಿಸಲಾಗುತ್ತದೆ.
ಈ ಹಬ್ಬದ ಆಚರಣೆಗೆ ತನ್ನದೇ ಆದ ಮಹತ್ವವಿದೆ. ಅವು ಯಾವುದೆಂದರೆ ಮದುವೆಯಾಗದ ಯುವತಿಯರು ನಾಗನಿಗೆ ಹಾಲನ್ನು ಎರೆದರೆ ಅವರಿಗೆ ಒಳ್ಳೆಯ ಗಂಡ ಸಿಗುವನೆಂದು, ಸುಖಮಯವಾದ ಜೀವನ ದೊರಕುವುದು ಹಾಗೂ ಮುತೈದೆಯರು ಹಾವಿನ ದ್ವೇಷ ಹನ್ನೆರಡು ವರ್ಷ ಎಂಬ ಸಂಕಲ್ಪದೊಂದಿಗೆ ತಮ್ಮ ಕುಟುಂಬದವರು ತಿಳಿದೋ, ತಿಳಿಯದೆಯೋ ಹಾವಿಗೆ ನೋವು ಉಂಟು ಮಾಡಿದರೆ ಆದರ ಪೂಜೆಯಿಂದ ನಾಗನ ದ್ವೇಷ ನಿವಾರಣೆಗಾಗಿ ಪೂಜಿಸುತ್ತಾರೆ.
ನಾಗ ದೋಷ ನಿವಾರಣೆಗಾಗಿ ಜಪಿಸಬೇಕಾದ ಮಂತ್ರಗಳು:
1. ಸರ್ವ ನಾಗಃ ಪ್ರಿಯಂತo ಮೇ ಯೇ ಕೌ ಚಿತ್ತ
ಪ್ರೀತ್ ವಿತ್ ಲೇ ಯೇ ಚ ಹೇಲಿ ಮರಿಚಿಸ್ತ ಯಂತರೇ
ದಿವಿ ಸಮೀಸ್ತಿತ.
2. ಯೇ ನದೀಶು ಮಹಾoಗಯೆ ಸರಸ್ವತಿ ಗಾಮೀನ
3. ಯೇ ಚ ವಾಪಿ ತದಗಶು ತೇಶು ಸರ್ವೇಶು ವಾಯು ನಮಃ
ಈ ಮಂತ್ರದ ಅರ್ಥವೆಂದರೆ ಸೂರ್ಯಕಿರಣ, ಆಕಾಶ, ಭೂಮಿ, ಸ್ವರ್ಗ, ನದಿಗಳು, ಈ ಸ್ಥಳಗಳಲ್ಲಿ ಹಾವು ವಾಸವಾಗಿದ್ದರೆ ನಾವು ಅವುಗಳ ಆರಾಧನೆಯನ್ನು ಮಾಡಿದರೆ ಹಾವುಗಳ ಆಶೀರ್ವಾದವನ್ನು ಪಡೆಯುತ್ತೇವೆoದು ತಿಳಿಯಲಾಗುತ್ತದೆ.
-ರಾಜೇಶ್ವರಿ ಎಸ್ ಹೆಗಡೆ, ಬೆಳಗಾವಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ