Belagavi NewsBelgaum NewsLatest

*ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಕಾಮುಕನಿಗೆ 20 ವರ್ಷ ಕಠಿಣ ಜೈಲುಶಿಕ್ಷೆ ವಿಧಿಸಿದ ಕೋರ್ಟ್*

ಪ್ರಗತಿವಾಹಿನಿ ಸುದ್ದಿ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸುಗಿದ ಆರೋಪಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಬೆಳಗಾವಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಆದೇಶ ಹೊರಡಿಸಿದೆ.

ಕುಡಚಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಬಾಲಕಿ ತಂದೆ ನೀಡಿದ್ದ ದೂರು ಆಧರಿಸಿ ಪೋಕ್ಸೋ ಕಾಯ್ದೆ ಯಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿ ವಿಕ್ರಮ್ ನನ್ನು ಬಂಧಿಸಿ ತನಿಖೆ ನಡೆಸಿದ ಪೊಲೀಸರಿಗೆ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿರುವುದು ತಿಳಿದುಬಂದಿತ್ತು.

ಅಪ್ರಾಪ್ತ ಬಾಲಕಿ ಎಂಬುದು ಗೋತ್ತಿದರೂ ಕೂಡಾ 24-10-2016 ರಂದು ಆರೋಪಿ ಬಾಲಕಿಗೆ ಪುಸಲಾಯಿಸಿ ಮದುವೆ ಮಾಡಿಕೊಳ್ಳೋಣ ಎಂದು ಹೇಳಿದ್ದ. ಅಲ್ಲದೇ ಇಬ್ಬರೂ ಓಡಿ ಹೋಗಿ ಮದುವೆಯಾಗೋಣ ಎಂದಿದ್ದ. ಇದಕ್ಕೆ ಬಾಲಕಿ ಒಪ್ಪಿರಲಿಲ್ಲ. ಬಾಲಕಿ ಒಪ್ಪದಿದ್ದಾಗ ಆರೋಪಿ ಆಕೆಯನ್ನು ಅಪಹರಿಸಿ ಮಹಾರಷ್ಟದ ಕೊಲ್ಲಾಪುರ ಜಿಲ್ಲೆಯ ಕರವಿರ ತಾಲೂಕಿನ ವರಣಗಿ ಗ್ರಾಮದ ಹೋಸ ಎರಿಯಾದ ಒಂದು ಮನೆಯಲ್ಲಿ ಕೂಡಿಹಾಕಿ ಬಲವಂತವಾಗಿ ಅತ್ಯಾಚಾರವೆಸಗಿದ್ದ. ವಿಷಯ ಯಾರಿಗಾದರೂ ಬಾಯ್ಬಿಟ್ಟರೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಎಂದು ಹೆದರಿಸಿದ್ದಾಗಿ ಆರೋಪಿ ಪೊಲೀಸರ ವಿಚರಣೆ ವೇಳೆ ತಪ್ಪೊಪ್ಪಿಕೊಂಡಿದ್ದ. ಪ್ರಕರಣ ಸಂಅಬ್ಂಧ ತನಿಖಾಧಿಕಾರಿ ಬಿ ಎಸ ಲೋಕಾಪೂರ ಹೆಚ್ಚುವರಿ ಜಿಲ್ಲಾ & ಸತ್ರ ನ್ಯಾಯಾಲಯ ವಿಶೇಷ ಶೀಘ್ರಗತಿ ಪೋಕ್ಸೋ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು. ನ್ಯಾ.ಸಿ ಎಮ್ ಪುಷ್ಪಲತಾ ಆರೋಪಿ ವಿಕ್ರಮ್ ಬಸವರಾಜ ಪಟ್ಟಿಕರ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು ತೀರ್ಪು ನೀಡಿದ್ದು, ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10.000/- ರೂಪಾಯಿ ದಂಡ ವಿದಿಸಿ ತೀರ್ಪು ನೀಡಿದ್ದಾರೆ.

Home add -Advt

ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ರೂ ಒಂದು ಲಕ್ಷ ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಸಿದೆ.

Related Articles

Back to top button