Film & Entertainment

*ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಯಾರಿಗೆಲ್ಲ ಪ್ರಶಸ್ತಿ? ಇಲ್ಲಿದೆ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: 2020ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ, ಅಕ್ಷತಾ ಪಾಂಡವಪುರ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

‘ಜಂಟಲ್ ಮ್ಯಾನ್’ ಚಿತ್ರಕ್ಕೆ ಪ್ರಜ್ವಲ್ ದೇವರಾಜ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರೆ, ‘ಪಿಂಕಿ ಎಲ್ಲಿ’ ಸಿನಿಮಾದ ಅಭಿನಯಕ್ಕೆ ಅಕ್ಷತಾ ಪಾಂಡವಪುರ ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

‘ಪಿಂಕಿ ಎಲ್ಲಿ’ ಸಿನಿಮಾ ಮೊದಲ ಅತ್ಯುತ್ತಮ ಸಿನಿಮಾ ಹಾಗೂ ‘ವರ್ಣಪಟಲ’ ಸಿನಿಮಾ ಎರಡನೇ ಅತ್ಯುತ್ತಮ ಸಿನಿಮಾ ಹಾಗೂ ‘ಹರಿವ ನದಿಗೆ ಮೈಯೆಲ್ಲ ಕಾವಲು’ ಸಿನಿಮಾ ಮೂರನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿದೆ.

‘ಗಿಳಿಯು ಪಂಜರದೊಳಿಲ್ಲ’ ಹಾಗೂ ‘ಈ ಮಣ್ಣು’ ಚಿತ್ರಕ್ಕೆ ವಿಶೇಷ ಸಾಮಾಜಿಕ ಕಳಕಳಿ ಚಿತ್ರ ಪ್ರಶಸ್ತಿ ಪ್ರಕಟವಾಗಿದೆ. ‘ಫೋರ್ ವಾಲ್ಸ್’ ಅತ್ಯುತ್ತಮ ಜನಪ್ರಿಯ ಮನರಂಜನಾ ಸಿನಿಮಾ, ‘ಪದಕ’ ಅತ್ಯುತ್ತಮ ಮಕ್ಕಳ ಚಿತ್ರ ಹಾಗೂ ತುಳುವಿನ ‘ಜೀಟಿಗೆ’ ಅತ್ಯುತ್ತಮ ಪ್ರಾದೇಶಿಕ ಭಾಷೆ ಚಿತ್ರ ಪ್ರಶಸ್ತಿ ಪಡೆದಿದೆ.

Home add -Advt

ವಿವರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ –

https://mail.google.com/mail/u/0?ui=2&ik=8ea932610f&attid=0.1&permmsgid=msg-a:r-6085316970770597401&th=195862c2361af3e0&view=att&disp=inline&realattid=195862bb0626ca9779c1&zw

Related Articles

Back to top button