Kannada NewsKarnataka NewsLatest

ಸಿಎಂ ಸಿದ್ದರಾಮಯ್ಯ ಗೋಕಾಕ ಬಾಲಕಿಯ ಬೆನ್ನು ತಟ್ಟಿದ್ದೇಕೆ ಗೊತ್ತೇ?

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಇಂದಿನ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳ ಸರಳತೆ ಹಾಗೂ ಮಕ್ಕಳ ಬಗೆಗಿನ ಅವರ ಅಕ್ಕರೆ, ಸಂಸ್ಕೃತಿಯ ಬಗೆಗಿನ ಅವರ ಪ್ರೀತಿಗೆ ಉದಾಹರಣೆಯಾಗುವಂತಹ ಸ್ವಾರಸ್ಯಕರ ಸಂಗತಿಯೊಂದು  ನಡೆಯಿತು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಡಾ.ವೆಂಕಟೇಶಯ್ಯ  ಅವರಿಗೆ ಗೋಕಾಕದ ಒಬ್ಬ 15 ವರ್ಷದ ಒಂಬತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಪ್ರತೀಕ್ಷ ಮಲ್ಲಿಕಾರ್ಜುನ ಕೊಕ್ಕರಿ ಅವರು ಭೇಟಿ ಮಾಡಿ ತಾನು ಬರೆದ ‘ಹೆಣ್ಣಲ್ಲವೇ ನಮ್ಮನ್ನೆಲ್ಲ ಹಡೆದ  ತಾಯಿ ‘ಎಂಬ ಕಾದಂಬರಿಯನ್ನು ಕೊಟ್ಟು ಮುಖ್ಯಮಂತ್ರಿಗಳಿಗೆ ಕೊಡಲು ಮನವಿ ಮಾಡಿದರು.

ಆಪ್ತ ಕಾರ್ಯದರ್ಶಿಗಳು ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ಕೂಡಲೇ  ಅದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಸಮಾರಂಭ ನಡೆಯುತ್ತಿದ್ದ ವೇದಿಕೆಯಲ್ಲಿಯೇ  ವಿದ್ಯಾರ್ಥಿನಿಯನ್ನು ಕರೆದು , ಆಕೆ ಬರೆದ ಕೃತಿಯನ್ನು ಪಡೆದುಕೊಂಡು ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಇಷ್ಟು ಚಿಕ್ಕವಯಸ್ಸಿಗೆ ಕಾದಂಬರಿ ಬರೆದ ಆಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಒಂದು ಚಿತ್ರ ತೆಗೆಯುವಂತೆಯೂ ಸೂಚಿಸಿದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button