Belagavi NewsBelgaum NewsKannada NewsKarnataka NewsLatest

*ನಿಮ್ಮ ಮನೆಗೆ ನೀರು ಬಿಡುವ ಮಾಹಿತಿ ಮುಂಚೆ ಗೋತ್ತಾಗಬೇಕೆ..?: ಕೂಡಲೆ ಈ ಕೆಲಸ ಮಾಡಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೆ.ಯು.ಡಬ್ಲ್ಯು.ಎಸ್.ಎಮ್.ಪಿ. 24×7 ಕುಡಿಯುವ ನೀರು ಸರಬರಾಜು ಯೋಜನೆಯಡಿ BBPS ಸೇರಿದಂತೆ ಆನ್‌ ಲೈನ್ ಮೂಲಕ ನೀರಿನ ಬಿಲ್ ಪಾವತಿಸಲು ಹಾಗೂ ವಿವಿಧ ಸೇವಾ ಸಂದೇಶಗಳನ್ನು ಪಡೆಯಲು ಮೊಬೈಲ್ ಸಂಖ್ಯೆಯನ್ನು ನೀರಿನ ಸಂಪರ್ಕದೊಂದಿಗೆ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.

ನೀರು ಸರಬರಾಜು ವೇಳಾಪಟ್ಟಿ ಮಾಹಿತಿ, ನೀರು ಸರಬರಾಜು ವ್ಯತ್ಯಯ / ತುರ್ತು ನಿರ್ವಹಣಾ ಮಾಹಿತಿ, ಬಿಲ್ ಪಾವತಿ ಜ್ಞಾಪನೆ (Payment Reminder), ಆನ್‌ಲೈನ್ ಬಿಲ್ ಪಾವತಿ ಮಾಹಿತಿ, ದೂರು ದಾಖಲಾತಿ ಹಾಗೂ ಪರಿಹಾರ ಮಾಹಿತಿ, ಇತರೆ ಪ್ರಮುಖ ಸಾರ್ವಜನಿಕ ಪ್ರಕಟಣೆಗಳನ್ನು ಮೊಬೈಲ್ ಸಂಖ್ಯೆ ನೋಂದಾಯಿಸಿದ್ದಲ್ಲಿ ಮಾತ್ರ ಪಡೆಯಬಹುದಾಗಿದೆ.

Home add -Advt

ಮೊಬೈಲ್ ಸಂಖ್ಯೆಯನ್ನು ನವೀಕರಿಸುವ ವಿಧಾನಗಳು

ನಿಮ್ಮ ಪ್ರದೇಶದ ಬಿಲ್ ಕಲೆಕ್ಟರ್ ಅವರಿಗೆ ಮಾಹಿತಿ ನೀಡಿ, ಟೋಲ್ ಫ್ರೀ ಸಂಖ್ಯೆ(1800 425 5656) ಗೆ ಕರೆ ಮಾಡಿ ಹತ್ತಿರದ ಗ್ರಾಹಕ ಸೇವಾ ಕೇಂದ್ರಕ್ಕೆ (Customer Care Centre) ಭೇಟಿ ನೀಡಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿ, ನವೀಕರಿಸಿಕೊಳ್ಳಿ ಎಂದು ಕೆ.ಯು.ಡಲ್ಲು.ಎಸ್.ಎಮ್.ಪಿ. ಯ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button