Beereshwara 27
Emergency Service

ಮೂತ್ರಪಿಂಡದಿಂದ ನೂರಾರು ಹರಳುಗಳನ್ನು ತೆಗೆದ ವೈದ್ಯರು!; ಕೆಎಲ್ಇ ಆಸ್ಪತ್ರೆ ವೈದ್ಯರ ಯಶಸ್ವಿ ಕಾರ್ಯಾಚರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಪದೇಪದೆ ಸೊಂಟ ನೋವು ಹಾಗೂ ಕಿಬ್ಬೊಟ್ಟೆಯ ಊತದೊಂದಿಗೆ ಮೂತ್ರಪಿಂಡದ (ಕಿಡ್ನಿಯ) ವಿಪರೀತ ಭಾದೆ ಅನುಭವಿಸುತ್ತಿದ್ದ 60 ವರ್ಷದ ಹಿರಿಯ ನಾಗರಿಕರೊಬ್ಬರಿಗೆ ಯಶಸ್ವಿಯಾಗಿ ಲೇಸರ್ ಶಸ್ತ್ರಚಿಕಿತ್ಸೆಯ ಮೂಲಕ ಮೂತ್ರಪಿಂಡದ ಹರಳುಗಳನ್ನು ಯಶಸ್ವಿಯಾಗಿ ಹೊರತೆಗೆದು ಉಪಚರಿಸಲಾಗಿದೆ.

ಈ ರೋಗಿ ಸತತ 3 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಅಲ್ಲದೇ ಅನಿಯಂತ್ರಿತ ಮಧುಮೇಹ ಹಾಗೂ ರಕ್ತದೊತ್ತಡದ ಸಮಸ್ಯೆಯಿಂದಾಗಿ ವೈದ್ಯರಿಗೆ ಚಿಕಿತ್ಸೆ ನೀಡಲು ಸವಾಲೆನಿಸುವ ಪ್ರಸಂಗ ಎದುರಾಗಿತ್ತು. ಅಲ್ಟ್ರಾಸೋನೊಗ್ರಾಫಿಯ ಮೂಲಕ ಪರೀಕ್ಷಿಸಿದಾಗ ಅವರ ಮೂತ್ರಪಿಂಡದಲ್ಲಿ ಸುಮಾರು ನೂರಕ್ಕೂಅಧಿಕ ಹರಳುಗಳಿರುವುದು ತಿಳಿದುಬಂದಿತು. ವಿಪರೀತ ಭಾಧೆಯಿಂದ ಚಿಕಿತ್ಸೆಗೆ ತೀವ್ರ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ಮೂತ್ರಪಿಂಡ ವೈದ್ಯ ಡಾ.ಅಮೇಯ ಪಥಾಡೆ ಅವರು ರೋಗಿಗೆ ಧೈರ್ಯ ತುಂಬಿ ಅವರನ್ನು ಶಸ್ತ್ರಚಿಕಿತ್ಸೆಗೆಮಾನಸಿಕವಾಗಿ ಸನ್ನಧ್ದಗೊಳಿಸಿದರು.

ನಂತರ ಸತತ 2 ಘಂಟೆಗಳ ಕಾಲ ನಡೆದ ಲೇಸರ ಶಸ್ತçಚಿಕಿತ್ಸೆಯಲ್ಲಿ ನಿರತರಾದ ಡಾ. ಅಮೇಯ ಪಥಾಡೆ, ವೈದ್ಯ ವಿದ್ಯಾರ್ಥಿಗಳಾದ ಡಾ.ಮನ್ ಜಿತ್ ಹಾಗೂ ಡಾ.ಈಶ್ವರ ಮತ್ತು ಅರವಳಿಕೆ ವಿಭಾಗದ ಮುಖ್ಯಸ್ಥ ಡಾ.ಆರ್.ಜಿ. ನೆಲವಿಗಿ ಅವರ ತಂಡ ಕಾರ್ಯಾಚರಿಸಿ ಮೂತ್ರಪಿಂಡದಲ್ಲಿದ್ದ ಎಲ್ಲ ಹರಳುಗಳನ್ನು ಹೊರ ತೆಗೆದಿದೆ.

ಈ ಕುರಿತು ಮಾತನಾಡಿದ ಡಾ.ಅಮೇಯ ಪಥಾಡೆ, “ಮೂತ್ರಪಿಂಡದಲ್ಲಿ ಹರಳುಗಳುಗಳಾಗುವುದು ಇಂದಿನ ದಿನಗಳಲ್ಲಿ ಸಹಜವಾಗಿದೆ. ನಾವು ದಿನನಿತ್ಯ ಸೇವಿಸುವ ಆಹಾರ ಇದಕ್ಕೆಕಾರಣವಾಗಿದೆ. ನಾವು ಸೇವಿಸಿದಷ್ಟು ಆಹಾರಕ್ಕೆತಕ್ಕಂತೆ ನಮ್ಮ ಶರೀರಕ್ಕೆ ವ್ಯಾಯಾಮ ಹಾಗೂ ಸಮರ್ಪಕವಾದ ನೀರಿನ ಸೇವನೆಯಿಂದ ದೇಹದಲ್ಲಿಉತ್ಪತ್ತಿಯಾಗುವ ಕ್ಯಾಲ್ಸಿಯಂ ಮತ್ತಿತರ ಪೌಷ್ಟಿಕಾಂಶಗಳು ಶರೀರಕ್ಕೆ ಶಕ್ತಿಯಾಗಿ ಪರಿಣಮಿಸುತ್ತವೆ. ಆದರೆ ವ್ಯಾಯಾಮ ಮತ್ತು ನೀರಿನ ಸೇವನೆ ಕಡೆಗಣಿಸಿದರೆ ಶರೀರದಲ್ಲಿನ ಕ್ಯಾಲ್ಸಿಯಂ ಹರಳಿನ ರೂಪಕ್ಕೆತಿರುಗಿ ಮೂತ್ರಪಿಂಡದ ಸಮಸ್ಯೆಗಳು ತಲೆದೋರಬಹುದಾಗಿದೆ” ಎಂದು ತಿಳಿಸಿದರು.

“ಮೂತ್ರಪಿಂಡದ ಹರಳುಗಳ ಸಮಸ್ಯೆಯಿಂದ ದೂರ ಉಳಿಯಬಹುದಾಗಿದೆ. ಅಲ್ಲದೇ ಇಂತಹ ಸಮಸ್ಯೆಗಳು ಕಂಡುಬಂದಾಕ್ಷಣ ವೈದ್ಯರನ್ನು ಕಂಡು ತಕ್ಕಉಪಚಾರ ಪಡೆಯುವುದು ಅತ್ಯಗತ್ಯವಾಗಿದೆ” ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಕೆಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕ ಡಾ.ಎಸ್ ಸಿ ಧಾರವಾಡ, ಯುಎಸ್‌ಎಂ ಕೆ ಎಲ್ ಇ ಯ ನಿರ್ದೇಶಕ ಡಾ. ಎಚ್.ಬಿ. ರಾಜಶೇಖರ ಅವರು ವೈದ್ಯರತಂಡಕ್ಕೆ ಅಭಿನಂದಿಸಿದ್ದಾರೆ. ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಸಹ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

Bottom Ad 1
Bottom Ad 2

You cannot copy content of this page