Latest

ಇಂಜಕ್ಷನ್ ಚುಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ವೈದ್ಯ

ಪ್ರಗತಿವಾಹಿನಿ ಸುದ್ದಿ; ಗುರುಗ್ರಾಮ: ವೈದ್ಯನೊಬ್ಬ ತನಗೆ ತಾನೇ ವಿಷದ ಇಂಜಕ್ಷನ್ ಚುಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿದೆ.

ಮನುಜ್ ಸೋಡಿ ಆತ್ಮಹತ್ಯೆಗೆ ಶರಣಾಗಿರುವ ವೈದ್ಯ. ಆತ್ಮಹತ್ಯೆಗೂ ಮುನ್ನ ತಿಜೋರಿ ಮೇಲೆ ಐ ಲವ್ ಯು ಎಂದು ಬರೆದಿದ್ದಾರೆ. ಖಾಸಗಿ ಆಸ್ಪತ್ರೆಯ ಐಸಿಯು ಎಕ್ಸ್ ಪರ್ಟ್ ಆಗಿ ಕೆಲಸ ಮಾಡುತ್ತಿದ್ದ ಮನುಜ್, ಸಾವಿಗೂ ಮೊದಲು ಮಗಳ ಬಳಿ ಬಂದಿದ್ದ ವೈದ್ಯ ಆಕೆ ಜೊತೆ ಮಾತನಾಡುತ್ತ ಕೆಲ ಸಮಯ ಕಳೆದಿದ್ದಾರೆ. ನಂತರ ರೂಮಿಗೆ ಹೋಗಿ ವಿಷದ ಇಂಜಕ್ಷನ್ ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತುಂಬಾ ಸಮಯವಾದರೂ ತಂದೆ ಹೊರಬರದಿದ್ದಾಗ ತಂದೆ ರೂಮಿಗೆ ಹೋಗಿ ನೋಡಿದ್ದಾಳೆ. ಆತ್ಮಹತ್ಯೆಗೆ ಶರಣಾಗಿರುವ ತಂದೆಯನ್ನು ಕಂಡು ಶಾಕ್ ಆಗಿದ್ದಾಳೆ. ಮನುಜ್ ಗೆ ಓರ್ವ ಮಗ ಹಾಗೂ ಸೊಸೆಯಿದ್ದರು. ಆದರೆ ಇಬ್ಬರ ದಾಂಪತ್ಯ ಜಿವನದಲ್ಲಿ ಸಮರಸವಿರಲಿಲ್ಲ. ಇದರಿಂದ ಮನುಜ್ ತುಂಬಾ ನೊಂದಿದ್ದರು ಎನ್ನಲಾಗಿದೆ.

 

Home add -Advt

Related Articles

Back to top button