Latest

ಗುರುವಾರ ಕರ್ನಾಟಕ ಬಂದ್ ಕರೆ ಕೊಟ್ಟ ಮುಸ್ಲಿಂ ಸಂಘಟನೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಹಿಜಾಬ್ ವಿಷಯದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ  ತೀರ್ಪನ್ನು ವಿರೋಧಿಸಿ ಮುಸ್ಲಿಂ ಸಂಘಟನೆಯೊಂದು ಗುರುವಾರ ಕರ್ನಾಟಕ ಬಂದ್ ಕರೆ ಕೊಟ್ಟಿದೆ.

ಅಮೀರ್ ಎ ಷರಿಯತ್ ಸಂಘಟನೆ ಕರ್ನಾಟಕ ಬಂದ್ ಗೆ ಕರೆ ನೀಡಿದೆ. ಶಾಂತಿಯುತವಾಗಿ ಬಂದ್ ನಡೆಸುವಂತೆ ಸಂಘಟನೆ ತಿಳಿಸಿದ್ದು, ಎಷ್ಟರ ಮಟ್ಟಿಗೆ ಪ್ರತಿಕ್ರೆಯ ಸಿಗಲಿದೆ ಕಾದು ನೋಡಬೇಕಿದೆ.

ಹಿಜಾಬ್ ಅತ್ಯಗತ್ಯವಲ್ಲ, ಶಾಲೆಗಳಲ್ಲಿ ಸರಕಾರದ ಆದೇಶದಂತೆ ಸಮವಸ್ತ್ರವೇ ಮುಖ್ಯ ಎಂದು ಉಚ್ಛ ನ್ಯಾಯಾಲಯದ ತೀರ್ಪು ನೀಡಿದೆ. ಇದರ ವಿರುದ್ಧ ಕೆಲವು ಸಂಘಟನೆಗಳು ಸರ್ವೋಚ್ಛ ನ್ಯಾಯಾಲಯದ ಕದ ತಟ್ಟಿವೆ. ತುರ್ತಾಗಿ ಪ್ರಕರಣ ಕೈಗೆತ್ತಿಕೊಳ್ಳುವಂತೆ ಮಾಡಿದ ಮನವಿಗೆ ಸುಪ್ರಿಂ ಕೋರ್ಟ್ ಸೊಪ್ಪು ಹಾಕಲಿಲ್ಲ.

ಇದೀಗ ಪರೀಕ್ಷೆ ಸಮಯವಾಗಿದ್ದರಿಂದ ಹಿಜಾಬ್ ವಿಷಯ ಮುಸ್ಲಿಂ ಹೆಣ್ಣು ಮಕ್ಕಳನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದೆ. ಶಿಕ್ಷಣ ಮುಖ್ಯ, ಹಿಜಾಬ್ ಮುಖ್ಯವಲ್ಲ ಎಂದು ಅನೇಕ ಮುಸ್ಲಿಂ ಮುಖಂಡರೂ ತಿಳಿ ಹೇಳಿದ್ದಾರೆ. ಆದರೆ ಕೆಲವೇ ಕೆಲವು ಮೂಲಭೂತವಾದಿಗಳು ಮುಸ್ಲಿಂ ಹೆಣ್ಣು ಮಕ್ಕಳ ಹಾದಿ ತಪ್ಪಿಸಿ ಶಿಕ್ಷಣಕ್ಕೆ ಕಲ್ಲು ಹಾಕುತ್ತಿದ್ದಾರೆ.

Home add -Advt

ಬುಧವಾರ ಸಿಹಿ ಸುದ್ದಿ ಕೊಟ್ಟ ಸಿಎಂ ಬೊಮ್ಮಾಯಿಗೆ ಸರಕಾರಿ ನೌಕರರ ಸಂಘದ ಸನ್ಮಾನ

Related Articles

Back to top button