Latest

ಮುಷ್ಕರ ಕೈಬಿಟ್ಟ ವೈದ್ಯರು

ಪ್ರಗತಿವಾಹಿನಿ ಸುದ್ದಿ; ಮೈಸೂರು: ನಂಜನಗೂಡು ಟಿಹೆಚ್‍ಒ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ವೈದ್ಯರು ಸಿಎಂ ಯಡಿಯೂರಪ್ಪ ಮನವೊಲಿಕೆ ಹಿನ್ನೆಲೆ ಮುಷ್ಕರ ಹಿಂಪಡೆದಿದ್ದಾರೆ.

ಈ ಕುರಿತು ವೈದ್ಯರ ಸಂಘದ ಜಿಲ್ಲಾಧ್ಯಕ್ಷ ಡಾ.ದೇವಿ ಆನಂದ್ ಮಾಹಿತಿ ನೀಡಿದ್ದು, ಸರ್ಕಾರದ ಮುಂದೆ ಹಲವು ಷರತ್ತು ಇಟ್ಟಿದ್ದೇವೆ. ಆರೋಗ್ಯ ಇಲಾಖೆ ಅಧಿಕಾರಿಗಳೇ ನಮಗೆ ನೋಡಲ್ ಅಧಿಕಾರಿಗಳಾಗಬೇಕು. ಕೆಎಎಸ್, ಐಎಎಸ್ ಅಧಿಕಾರಿಗಳು ಕೊರೊನಾ ನೊಡಲ್ ಆಫಿಸರ್ ಆಗುವುದು ಬೇಡ. ಗುತ್ತಿಗೆ ಆಧಾರದ ಮೇಲೆ ಅರೆಕಾಲಿಕ ವೈದ್ಯಕೀಯ ಸಿಬ್ಬಂದಿ ಹಾಗೂ ಗ್ರೂಪ್ ಡಿ ನೌಕರರನ್ನ ನೇಮಕ ಮಾಡಿಕೊಳ್ಳಬೇಕು ಎಂಬ ಷರತ್ತುಗಳನ್ನು ಸರ್ಕಾರದ ಮುಂದೆ ಇರಿಸಿದ್ದಾರೆ. ಪ್ರಕರಣ ವರದಿ ಬರೋವರೆಗು ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗಲು ವೈದ್ಯರ ಸಂಘ ನಿರ್ಧರಿಸಿದೆ ಎಂದು ಹೇಳಿದ್ದಾರೆ. ಇದೇ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿಕೆಯನ್ನು ಖಂಡಿಸಿದ್ದಾರೆ.

ಮಂತ್ರಿಯಾಗಿ ನಾನೇ ಇಷ್ಟು ಟೆಸ್ಟ್ ಮಾಡಿ ಅಂತ ಡಿಸಿ ಹಾಗೂ ಸಿಇಒಗಳಿಗೆ ಟಾರ್ಗೆಟ್ ಕೊಡುತ್ತೇನಿ. ಯಾರನ್ನ ಅಮಾನತು ಮಾಡಬೇಕು. ಕಾರ್ಯದ ಒತ್ತಡ ಸ್ವೀಕಾರ ಮಾಡಿ ಕೆಲಸ ಮಾಡೋವರು ಸರ್ಕಾರದಲ್ಲಿರಬೇಕು. ಇಲ್ಲ ಅಂದ್ರೆ ಅವರು ಸ್ವತಂತ್ರರಿದ್ದಾರೆ. ಖಾಸಗಿಯಲ್ಲಿ ಕೆಲಸ ಮಾಡಲಿ. ಎಲ್ಲದಕ್ಕೂ ಲಿಮಿಟ್ ಇದೆ ಅಂತ ಪ್ರತಿಭಟನಾ ನಿರತ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button