ಪ್ರಗತಿವಾಹಿನಿ ಸುದ್ದಿ: ಕೊಲ್ಕತ್ತಾ ಟ್ರೈನಿ ಡಾಕ್ಟರ್ ರೇಪ್ ಅಂಡ್ ಮರ್ಡರ್ ಕೇಸ್ ವಿಚಾರದಲ್ಲಿ ಪ್ರೊಟೆಸ್ಟ್ ಹೆಚ್ಚಾಗುತ್ತಿದ್ದು, ಪ್ರತಿಭಟನಾಕಾರರು ಸಿಎಂ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಡೆಡ್ ಲೈನ್ ನೀಡಿದ್ದಾರೆ. ಕೂಡಲೇ ತಮ್ಮ ಬೇಡಿಕೆ ಈಡೇರಿಕೆಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಈಗಾಗ್ಲೆ ಎಲ್ಲೆಡೆ ಅನಿರ್ಧಿಷ್ಟಾವಧಿ ಮುಷ್ಕರ ನಡೆಯುತ್ತಿದ್ದು, ಸೋಮವಾರದಿಂದ ಈ ಪ್ರತಿಭಟನೆಯನ್ನ ಇತರೆ ವೈದ್ಯಕೀಯ ವಲಯಗಳಿಗೂ ವಿಸ್ತರಿಸುವ ವಾರ್ನಿಂಗ್ ನೀಡಲಾಗಿದೆ. ಮುಂದಿನ ಸೋಮವಾರದೊಳಗೆ ಸಿಎಂ ಮಮತಾ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ವೈದ್ಯಕೀಯ ಸೌಲಭ್ಯದ ಎಲ್ಲಾ ವಲಯಗಳು ಸ್ತಬ್ದಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಕೊಲೆ ಪ್ರಕರಣದ ನಂತರ ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಸುಧಾರಣಾ ಕ್ರಮಗಳ ಬಗ್ಗೆ ಹಲವು ಬೇಡಿಕೆಗಳನ್ನ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ಮುಂದೆ ಇಡಲಾಗಿದೆ. ತ್ವರಿತವಾಗಿ ಬೇಡಿಕೆ ಈಡೇರಿಸುವ ಕೂಗು ಕೇಳಿಬಂದಿದೆ. ಇದೀಗ ಆ ಬೇಡಿಕೆ ಈಡೇರಿಕೆಗೆ ಸೋಮವಾರದವರೆಗೆ ಡೆಡ್ ಲೈನ್ ನೀಡಲಾಗಿದೆ.ಈಗಾಗ್ಲೆ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಕಲ್ಕತ್ತಾ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ