Kannada NewsKarnataka NewsLatest

*ಪ್ರವಾಸಕ್ಕೆ ಬಂದಿದ್ದ ಐವರ ಮೇಲೆ ಹುಚ್ಚುನಾಯಿ ದಾಳಿ; ಆಸ್ಪತ್ರೆಗೆ ದಾಖಲು*

ಪ್ರಗತಿವಾಹಿನಿ ಸುದ್ದಿ; ಮೈಸೂರು: ಬೃಂದಾವನ ಗಾರ್ಡನ್ ವೀಕ್ಷಿಸಲು ಪ್ರವಾಸಕ್ಕೆ ಬಂದಿದ್ದ ಐವರ ಮೇಲೆ ಹುಚ್ಚುನಾಯಿ ದಾಳಿ ನಡೆಸಿರುವ ಘಟನೆ ಕೆ.ಆರ್.ಎಸ್ ನಲ್ಲಿ ನಡೆದಿದೆ.

ಮೈಸೂರಿಗೆ ಬಂದವರು ಸಾಮಾನ್ಯವಾಗಿ ಕೆ.ಆರ್.ಎಸ್, ಬೃಂದಾವನ ಗಾರ್ಡನ್ ವೀಕ್ಷಿಸದೇ ಇರರು. ಆದರೆ ಬೃಂದಾವನ ಗಾರ್ಡನ್ ನಲ್ಲಿ ಇದೀಗ ಹುಚ್ಚುನಾಯಿಯ ಹಾವಳಿ ಹೆಚ್ಚಾಗಿದ್ದು, ಪ್ರವಾಸಿಗರನ್ನು ಆತಂಕಕ್ಕೀಡುಮಾಡಿದೆ. ಹುಚ್ಚುನಾಯಿಯೊಂದು ಬೃಂದಾವನ ಗಾರ್ಡನ್ ಹೊಕ್ಕಿದ್ದು, ಸಿಕ್ಕಸಿಕ್ಕವರನ್ನು ಕಚ್ಚಿ ಗಾಯಗೊಳಿಸುತ್ತಿದೆ ಎಂದು ತಿಳಿದುಬಂದಿದೆ.

ಐವರು ಪ್ರವಾಸಿಗರ ಮೇಲೆ ದಾಳಿ ನಡೆಸಿದ ಹುಚ್ಚುನಾಯಿ, ಕಚ್ಚಿ ಗಾಯಗೊಳಿಸಿದೆ. ಗಾಯಾಳುಗಳನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಚ್ಚುನಾಯಿ ಸಿಕ್ಕಸಿಕ್ಕವರ ಮೇಲೆ ದಾಳಿ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕೈಗೊಳ್ಳದೇ ಬೇಜವಾಬ್ದಾರಿ ಮೆರೆದಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಹುಚ್ಚುನಾಯಿ ಬಗ್ಗೆ ಕ್ರಮವಹಿಸಲಿ ಎಂದು ಒತ್ತಾಯಿಸಿದ್ದಾರೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button