ಡೊನಾಲ್ಡ್ ಟ್ರಂಪ್ ಬಂಧನ; ಹೈ ಅಲರ್ಟ್ ಘೋಷಣೆ

ನ್ಯೂಯಾರ್ಕ್: ನೀಲಿಚಿತ್ರ ತಾರೆಗೆ ಹಣ ಸಂದಾಯ ಮಾಡಿದ್ದ ಕ್ರಿಮಿನಲ್‌ ಪ್ರಕರಣದ ಸಂಬಂಧ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಇದಕ್ಕೂ ಮುನ್ನ ಮ್ಯಾನ್‌ಹಾಟನ್‌ ಜಿಲ್ಲಾ ಅಟಾರ್ನಿಯ ಕೋರ್ಟ್‌ ಸಭಾಂಗಣದಲ್ಲಿ 76 ವರ್ಷ ವಯಸ್ಸಿನ ಟ್ರಂಪ್‌ ಶರಣಾದರು.

2016ರ ಅಧ್ಯಕ್ಷೀಯ ಚುನಾವಣೆ ವೇಳೆ ತಮ್ಮ ನಡುವಿನ ಅಕ್ರಮ ಸಂಬಂಧ ಮುಚ್ಚಿ ಹಾಕಲು ನೀಲಿ ಚಿತ್ರ ತಾರೆಗೆ 1.30 ಲಕ್ಷ ಡಾಲರ್ ಹಣವನ್ನು ನೀಡಿದ ಆರೋಪವನ್ನು ಟ್ರಂಪ್ ಎದುರಿಸುತ್ತಿದ್ದರು. ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಅಮೇರಿಕಾದ ಮೊದಲ ಮಾಜಿ ಅಧ್ಯಕ್ಷ ಎನ್ನುವ ಕುಖ್ಯಾತಿ ಟ್ರಂಪ್ ಗೆ ತಗುಲಿದೆ.

ಮಂಗಳವಾರ ಟ್ರಂಪ್ ಕೋರ್ಟ್ ಮುಂದೆ ವಿಚಾರಣೆಗೆ ಹಾಜರಾದರು. ಈ ಸಂದರ್ಭದಲ್ಲಿ ಅವರನ್ನು ಬಂಧಿಸಲಾಯಿತು. ಬಂಧನಕ್ಕೂ ಮೊದಲು ಪ್ರತಿಭಟನೆ ನಡೆಸುವಂತೆ ಟ್ರಂಪ್ ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ರು. ಹಾಗಾಗಿ ಪ್ರಮುಖ ರಸ್ತೆಗಳಲ್ಲೆಲ್ಲ ಬ್ಯಾರಿಕೇಡ್ ಹಾಕಿ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ನ್ಯೂಯಾರ್ಕ್ ನಗರದೆಲ್ಲೆಡೆ ಭಯದ ವಾತಾವರಣ ನಿರ್ಮಾಣವಾಗಿತ್ತು, ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದೆ.

Home add -Advt
https://pragati.taskdun.com/maharashtra-has-once-again-attacked-the-center-and-the-karnataka-government/

Related Articles

Back to top button