
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ದಾನಮಾಡುವವರೆಲ್ಲಾ ದಾನಿಗಳಲ್ಲ. ಅವರೆಲ್ಲಾ ದಾಸೋಹಿಗಳು. ಶರಣರು ದಾನಿಗಳನ್ನು ಸಂಸ್ಕಾರ ಕೊಟ್ಟು ದಾಸೋಹಿಗಳನ್ನಾಗಿ ಮಾಡಿದ್ದಾರೆ ಎಂದು ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮಿಗಳು ಹೇಳಿದ್ದಾರೆ.
ದಾನ ಕೊಡುವವನ ಕೈ ಮೇಲೆ ಇರುತ್ತದೆ. ಅದಕ್ಕೆ ಅವನಿಗೆ ಅಹಂಕಾರ ಬರುತ್ತದೆ, ತಗೆದುಕೊಳ್ಳುವವನ ಕೈ ಕೆಳಗೆ ಇರುವುದರಿಂದ ದಾನಪಡೆದವನಿಗೆ ಕೀಳರಿಮೆ ಬರುತ್ತದೆ ಎಂದರಿತು ದಾನ ಎಂಬ ಪದಕ್ಕೆ ಶರಣರು ಸಂಸ್ಕಾರಕೊಟ್ಟು ದಾಸೋಹ ಎಂದು ಮಾಡಿದ್ದಾರೆ.

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ನಾಣುಡಿಯಂತೆ ಒಬ್ಬ ಮಹಿಳೆ ಶಿಕ್ಷಣ ಪಡೆದರೆ ಮನೆಯ ಎಲ್ಲ ಮಕ್ಕಳು ಶಿಕ್ಷಣ ಪಡೆಯುತ್ತಾರೆ. ಅದಕ್ಕೆ ಬೆಳಗಾವಿ ರಡ್ಡಿ ಸಂಘ ಹೆಣ್ಣು ಮಕ್ಕಳಿಗೋಸ್ಕರ ಒಂದು ಭವ್ಯವಾದ ಸಮುಚ್ಚಯ ಕಟ್ಟಿದ್ದು ಶ್ಲಾಘನೀಯವಾದಂತಹುದು ಎಂದು ಶ್ರೀಗಳು ಹೇಳಿದರು.
ಬೆಳಗಾವಿ ರೆಡ್ಡಿ ಸಂಘ ಸಂಘಟಿಸಿದ್ದ ದಾನಿಗಳಾದ ವಿ.ಎಸ್ ಪಾಟೀಲ್ ಮತ್ತು ರಾಜೇಂದ್ರ ಪಾಟೀಲ್ ಅವರ ಸನ್ಮಾನ ಸಮಾರಂಭದಲ್ಲಿ ದಿವ್ಯ ಸಾನಿದ್ಯ ವಹಿಸಿ ಅವರು ಮಾತನಾಡಿದರು.

ನಮ್ಮ ಸಮಾಜ ನಮ್ಮ ಸಮಾಜಕ್ಕೆ ಮಾತ್ರ ಕೊಡುವ ಕೈ ಆಗಬಾರದು. ಎಲ್ಲ ಬಡ ಸಮಾಜಕ್ಕೂ ಕೊಡುವ ಕೈಗಳಾದಾಗ ಮಾತ್ರ ಅದಕ್ಕೆ ಒಂದು ಬೆಲೆ ಬರತ್ತೆ ಎಂದರು.

ಮುಖ್ಯ ಅತಿಥಿಗಳನ್ನು ಉಪಾಧ್ಯಕ್ಷ ಬಿ.ಎನ್ ಬಾವಲತಿ ಪರಿಚಯಿಸಿದರು. ಸನ್ಮಾನಿತರಾದ ವಿ.ಎಸ್ ಪಾಟೀಲ್ ಮತ್ತು ರಾಜೇಂದ್ರ ಪಾಟೀಲ್ ದಂಪತಿಗಳನನ್ನು ಟಿ.ಕೆ. ಪಾಟೀಲ್ ಪರಿಚಯಿಸಿದರು.
ಸನ್ಮಾನ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿಕೊಂಡ ಬೆಳಗಾವಿ ರಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮೂಳ್ಳೂರ್ ಪ್ರಾಸ್ತಾವಿಕ ಮಾತನಾಡಿದರು.
ಸಭೆಯಲ್ಲಿ ಗೌರವಾಧ್ಯಕ್ಷರಾದ ಇಂದಿರಾಬಾಯಿ ಭೀಮರಡ್ಡಿ ಮಳಲಿ, ಉಪಾಧ್ಯಕ್ಷ ಬಿ.ಎನ್.
ನಾಡಗೌಡಾ, ನಾರಾಯಣ ಕೆಂಚರೆಡ್ಡಿ, ಪ್ರಕಾಶ್ ಸೋನಾಲ್ಕರ್, ಪ್ರಕಾಶ್ ಚನ್ನಾಳ, ಉಮಾ ಸಾಲಿಗೌಡರ್ ಸೇರಿದಂತೆ ನೂರಾರು ಜನರು ಭಾಗಿಯಾಗಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ