Kannada NewsKarnataka NewsLatest

ಸುಳ್ಳು ಸುದ್ದಿ ನಂಬಬೇಡಿ: ಸವದತ್ತಿ ಯಲ್ಲಮ್ಮ ದೇವಸ್ಥಾನ ಸಿಇಒ ರವಿ ಕೊಟಾರಗಸ್ತಿ ಮನವಿ

ಪ್ರಗತಿವಾಹಿನಿ ಸುದ್ದಿ, ಸವದತ್ತಿ – ಸವದತ್ತಿ ಯಲ್ಲಮ್ಮ ದೇವಸ್ಥಾನ ಭಕ್ತರಿಗೆ ತೆರವು ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದ್ದು, ಭಕ್ತರು ನಂಬಬಾರದು ಎಂದು ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೊಟಾರಗಸ್ತಿ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಗತಿವಾಹಿನಿ ಜೊತೆ ಮಾತನಾಡಿದ ಅವರು, ಫೆಬ್ರವರಿ 1ರಿಂದ ದೇವಸ್ಥಾನ ಭಕ್ತರಿಗೆ ದರ್ಶನಕ್ಕೆ ಮುಕ್ತವಾಗಲಿದೆ ಎಂದು ಫೇಕ್ ನ್ಯೂಸ್ ಹರಡುತ್ತಿದ್ದು ಇದು ಸುಳ್ಳು. ಸಧ್ಯಕ್ಕೆ ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

ಕೊರೋನಾ 3ನೇ ಅಲೆ ಹರಡುತ್ತಿರುವುದರಿಂದ ಮತ್ತು ಮಹಾರಾಷ್ಟ್ರ ಭಾಗದಲ್ಲಿ ಕೊರೋನಾ ಹೆಚ್ಚಾಗಿರುವುದರಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನವನ್ನು ತೆರೆಯುವ ನಿರ್ಧಾರ ಮಾಡಿಲ್ಲ. ಹಾಗಾಗಿ ಭಕ್ತರು ಸುಳ್ಳು ಸುದ್ದಿಯನ್ನು ನಂಬಬಾರದು. ಸರಕಾರದಿಂದ ಒಂದೊಮ್ಮೆ ದೇವಸ್ಥಾನ ತೆರೆಯುವ ಆದೇಶ ಬಂದಲ್ಲಿ ಅದನ್ನು ಪಾಲಿಸಲಾಗುವುದು. ಆದರೆ ಸಧ್ಯಕ್ಕೆ ಅಂತಹ ಯಾವುದೇ ಆದೇಶ ಬಂದಿಲ್ಲ. ಮುಂದಿನ ಆದೇಶದವರೆಗೂ ದೇವಸ್ಥಾನ ಮುಚ್ಚಿರಲಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ ಫೆಬ್ರವರಿ 1ರಿಂದ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಅದೇ ಸುದ್ದಿಯನ್ನು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗುತ್ತಿದೆ. ಇದರಿಂದ ಭಕ್ತರು ಗೊಂದಲಕ್ಕೊಳಗಾಗುತ್ತಿದ್ದಾರೆ. ಹಾಗಾಗಿ ಯಾರೂ ಇಂತಹ ಸುದ್ದಿಯನ್ನು ಹರಡಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಜ.31ರಿಂದ ರಾತ್ರಿ ಕರ್ಫ್ಯೂ ತೆರವು; ಹಲವು ಮಾರ್ಗಸೂಚಿ ಸಡಿಲಿಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button