Kannada NewsKarnataka NewsPolitics

*ಡಿ.ಕೆ.ಶಿವಕುಮಾರ್ ಕಚೇರಿಗೆ ಬಾಂಬ್ ಬದರಿಕೆ ಕರೆ*

ಪ್ರಗತಿವಾಹಿನಿ ಸುದ್ದಿ: ಶಾಲಾ ಕಾಲೇಜು, ದೇವಸ್ಥಾನಗಳು, ವಿಮಾನ ನಿಲ್ದಾಣಗಳು, ಹೀಗೆ ಅನೇಕ ಕಡೆ ಬಾಂಬ್ ಬೆದರಿಕೆ ಕರೆಗಳು ಬರುತ್ತಿದ್ದು, ಇಂದು ಉಪ ಮುಖ್ಯಂಮತ್ರಿ ಡಿ.ಕೆ ಶಿವಕುಮಾರ ಅವರ ಬೆಂಗಳೂರಿನ ಕಚೇರಿಗೂ ಬಾಂಬ್ ಬೆದರಿಕೆ ಬಂದಿದೆ. 

ಡಿಸಿಎಂ ಡಿ.ಕೆ. ಶಿವಕುಮಾರ್ ಕಚೇರಿಗೆ ಇ-ಮೇಲ್ ಮೂಲಕ ಬೆದರಿಕೆ ಪತ್ರ ಬಂದು ತಲುಪಿದ್ದು ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇ-ಮೇಲ್ ಪ್ರತಿ ತಲುಪಿದೊಡನೇ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ತಪಾಸಣೆ ಕೈಗೊಂಡಿದ್ದಾರೆ. ಶ್ವಾನ ಪಡೆ, ಬಾಂಬ್ ಪತ್ತೆ ಮತ್ತು ಬಾಂಬ್ ನಿಷ್ಕ್ರಿಯ ದಳಗಳು ಪರಿಶೀಲನೆ ನಡೆಸಿದೆ. 

ಮೇಲ್ನೋಟಕ್ಕೆ ಇದೊಂದು ಹುಸಿ ಬಾಂಬ್ ಬೆದರಿಕೆ ಪತ್ರ ಎಂದು ತಿಳಿದುಬಂದಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಕಾರಣ ಇದೊಂದು ಹುಸಿಬಾಂಬ್ ಬೆದರಿಕೆ ಎಂಬುದು ಮನದಟ್ಟಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button