Latest

ಆರು ವರ್ಷದ ಬಾಲಕನ ಬದುಕು ಉಳಿಸಿತು ಡೋರೆಮನ್ ಕಾರ್ಟೂನ್!

ಪ್ರಗತಿವಾಹಿನಿ ಸುದ್ದಿ, ಲಕ್ನೋ: ಕಟ್ಟಡ ಕುಸಿತದಲ್ಲಿ ಸಿಲುಕಿಹಾಕಿಕೊಂಡ ಆರು ವರ್ಷದ ಬಾಲಕನೊಬ್ಬನಿಗೆ ಜೀವ ಉಳಿಸಿಕೊಳ್ಳಲು ಡೋರೆಮನ್ ಕಾರ್ಟೂನ್ ಸಹಾಯವಾಗಿದೆ.

ಸಮಾಜವಾದಿ ಪಕ್ಷದ ವಕ್ತಾರ ಅಬ್ಬಾಸ್ ಹೈದರ್ ಅವರ ಪುತ್ರ ಮುಸ್ತಫಾ ಎಂಬ ಬಾಲಕ ಕೂಡ ಕಟ್ಟಡ ಕುಸಿತದಲ್ಲಿ ಸಿಲುಕಿಹಾಕಿಕೊಂಡಿದ್ದ. ಆದರೆ ಟಿವಿಯಲ್ಲಿ ತಾನು ನೋಡಿದ ಡೋರೆಮನ್ ಕಾರ್ಟೂನ್ ಸರಣಿಯಲ್ಲಿ ನೋವಿತಾಗೆ ಡೋರೆಮೊನ್ ಕಲಿಸಿದ ಪಾಠವೊಂದು ಸಂಕಷ್ಟದ ಕಾಲದಲ್ಲಿ ಅವನಿಗೆ ನೆನಪಿಗೆ ಬಂದಿದೆ. ಅದನ್ನು ನೆನಪಿಸಿಕೊಂಡು ತಾನೂ ಕಾರ್ಯಗತಗೊಳಿಸಿದ್ದಾನೆ. ಇದು ಅವನ ಜೀವ ಉಳಿಸಿದೆ.

“ನಾನು ಭಯಭೀತನಾಗಿದ್ದೆ. ಆದರೆ ಡೋರೆಮೊನ್ ಸರಣಿಯ ಒಂದು ಸಂಚಿಕೆಯನ್ನು ನೆನಪಿಸಿಕೊಂಡೆ. ಇದರಲ್ಲಿ ಭೂಕಂಪದ ಸಮಯದಲ್ಲಿ ಮೂಲೆಗಳಲ್ಲಿ ಅಥವಾ ಹಾಸಿಗೆಯ ಕೆಳಗೆ ಆಶ್ರಯ ಪಡೆಯುವ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳುವ ಬಗ್ಗೆ ಡೋರೆಮೊನ್ ಹೇಳಿಕೊಟ್ಟಿದ್ದ. ಅದರಿಂದಲೇ ನೋವಿತಾ ಬಚಾವಾಗುತ್ತಾನೆ. ಆ ಕ್ಷಣ ನೆನಪಿಗೆ ಬರುತ್ತಲೇ ಒಂದು ಕ್ಷಣವೂ ವ್ಯರ್ಥ ಮಾಡದೆ, ನಾನು ಹಾಸಿಗೆಯ ಕೆಳಗೆ ಆಶ್ರಯ ಪಡೆದೆ” ಎಂದು ಮುಸ್ತಫಾ ಹೇಳಿಕೊಂಡಿದ್ದಾನೆ.

ಕಟ್ಟಡ ದುರಂತದಲ್ಲಿ ಬದುಕುಳಿದ 14 ಜನರಲ್ಲಿ ಮುಸ್ತಫಾ ಒಬ್ಬನಾಗಿದ್ದಾನೆ. ಪ್ರಸ್ತುತ ಎಸ್‌ಪಿಎಂ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾನೆ ಎಂದು ಹೇಳಲಾಗಿದೆ.

“ಮಮ್ಮಿ ಓಡಿಹೋಗುವುದನ್ನು ಮತ್ತು ಕಿರುಚುವುದನ್ನು ನಾನು ನೋಡಿದೆ. ಸ್ವಲ್ಪ ಸಮಯದಲ್ಲೇ, ಇಡೀ ಕಟ್ಟಡ ಕುಸಿದಿದೆ ಮತ್ತು ಎಲ್ಲವೂ ಕತ್ತಲೆಯಾಯಿತು..” ಎಂದು ಮುಸ್ತಫಾ ನೆನಪಿಸಿಕೊಂಡಿದ್ದಾನೆ. ಆದರೆ ಈ ವೇಳೆ ತಂದೆ ಅಬ್ಬಾಸ್ ಹೈದರ್ಮ ಮನೆಯಲ್ಲಿ ಇರಲಿಲ್ಲ, ಅವರ ಅಜ್ಜ, ಹಿರಿಯ ಕಾಂಗ್ರೆಸ್ ನಾಯಕ ಅಮೀರ್ ಹೈದರ್ ಅವರು ಘಟನೆಯಲ್ಲಿ ಬದುಕುಳಿದಿದ್ದಾರೆ.  ಬುಧವಾರ ಸಂಜೆಯವರೆಗೂ ತಾಯಿ ಮೃತಪಟ್ಟ ವಿಷಯವನ್ನು ಬಗ್ಗೆ ಬಾಲಕನಿಗೆ ತಿಳಿಸಿರಲಿಲ್ಲ.

*ಸಾಕ್ಷಾತ್ಕಾರ ಸಿನಿಮಾ ಖ್ಯಾತಿಯ ನಟಿ ಜಮುನಾ ನಿಧನ*

https://pragati.taskdun.com/jamunano-moresakshatkara-actress/

ಬೆಳಗಾವಿ ಮಹಿಳೆಯರಿಗಾಗಿ ಬಂತು ಪಿಂಕ್ ಬಸ್

https://pragati.taskdun.com/pink-bus-service-for-women-started-in-belagavi-city/

*ಮಾಜಿ ಸಿಎಂ ಎಸ್.ಎಂ.ಕೃಷ್ಣಗೆ ಪದ್ಮವಿಭೂಷಣ ಗೌರವ; ಅಭಿನಂದನೆ ಸಲ್ಲಿಸಿದ ಸಿಎಂ ಬೊಮ್ಮಾಯಿ*

https://pragati.taskdun.com/s-m-krishnapadmavibhushanacm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button