
ಪ್ರಗತಿವಾಹಿನಿ ಸುದ್ದಿ: ವರದಕ್ಷಿಣೆ ಕುರುಕುಳ ನೀಡುತ್ತಿದ್ದ ಪತಿಮಹಾಶಯನೊಬ್ಬ ಪತ್ನಿಯ ಕತ್ತು ಬಿಗಿದು ಸಾಯಿಇಸಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ನೇತ್ರಾವತಿ (26) ಪತಿಯಿಂದಲೇ ಕೊಲೆಯಾದ ಪತ್ನಿ. ಕೆಲ ವರ್ಷಗಳ ಹಿಂದೆ ನೇತ್ರಾವತಿಯನ್ನು ಹರಳಹಳ್ಳಿ ಗ್ರಾಮದ ದೇವೇಂದ್ರಪನಿಗೆ ವಿವಾಹ ಮಾಡಿಕೂಡಲಾಗಿತ್ತು. ಮದುವೆಯ ವೇಳೆ ಕುಟುಂಬದವರು ವರದಕ್ಷಿಣೆಗಾಗಿ 10 ತೊಲ ಬಂಗಾರ, 1 ಲಕ್ಷ ಹಣ, ಬೈಕ್ ಕೊಡಿಸಿದ್ದರು. ದಂಪತಿಗೆ ಇಬರು ಮಕ್ಕಳಿದ್ದರು. ಆದಾಗ್ಯೂ ಪತಿ ಮನೆಯವರು ನೇತ್ರಾವತಿಗೆ ವರದಕ್ಷಿಣೆ ಹಣಕ್ಕಾಗಿ ಮತ್ತೆ ಮತ್ತೆ ಕಿರುಕುಳ ನೀಡುತ್ತಿದ್ದರು.
ಪತಿ ದೇವೇಂದ್ರಪ್ಪ ಇನ್ನಿಲ್ಲದ ಹಿಂಸೆ ಕೊಡುತ್ತಿದ್ದ. ಇದೀಗ ಪತ್ನಿಯ ಕತ್ತನ್ನು ಸೀರೆಯಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.