
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಇಂಜಿನಿಯರಿಂಗ್ ಪದವಿಧರೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಐಶ್ವರ್ಯ ಆತ್ಮಹತ್ಯೆಗೆ ಶರಣಾದ ಮಹಿಳೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಕೊರಳೊಡ್ಡಿದ್ದಾಳೆ. 2020ರಲ್ಲಿ ಮಜುನಾಥ್ ಎಂಬಾತನನ್ನು ವಿವಾಹವಾಗಿದ್ದ ಐಶ್ವರ್ಯಾ ಗೆ ಪತಿ ಹಾಗೂ ಮನೆಯವರು ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು ಎನ್ನಲಾಗಿದೆ.
ಮದುವೆ ವೇಳೆ ಐಶ್ವರ್ಯ ಕುಟುಂಬದವರು 2 ಲಕ್ಷ ಹಣ, 240 ಗ್ರಾಂ ಚಿನ್ನಾಭರಣ ನೀಡಿದ್ದರು. ಮದುವೆ ಬಳಿಕ ವರದಕ್ಷಿಣೆಗಾಗಿ ಮಂಜುನಾಥ್ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಮತ್ತೆ 5 ಲಕ್ಷ ರೂಪಾಯಿ ಹಣವನ್ನು ಐಶ್ವರ್ಯ ಪೋಷಕರು ನೀಡಿದ್ದರು.
ಮೃತ ಐಶ್ವರ್ಯ ಹಾಗೂ ಮಂಜುನಾಥ್ ದಂಪತಿಗೆ ಒಂದುವರೆ ವರ್ಷದ ಮಗುವಿದೆ. ಪತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಐಶ್ವರ್ಯ ಡೆತ್ ನೋಟ್ ಬರೆದಿಟ್ಟು, ವಾಟ್ಸಪ್ ಮೂಲಕ ಕುಟುಂಬದವರಿಗೆ ಕಳುಹಿಸಿ, ನೇಣಿಗೆ ಕೊರಳೊಡ್ಡಿದ್ದಾಳೆ. ಕಬ್ಬನ್ ಪೇಟೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ