ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶ್ರೀ ಮ.ನಿ.ಪ್ರ.ಡಾ. ಸಿದ್ಧರಾಮ ಸ್ವಾಮೀಜಿ ಜಗದ್ಗುರು ತೊಂಟದಾರ್ಯ್ಯ ಮಠ, ಗದಗ-ಡಂಬಳ ಅವರ ದಿವ್ಯ ಸಾನಿಧ್ಯದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಸಿ.ಡಿ. ಕರ್ಕಿ, ಗೌರವ ಕಾರ್ಯದರ್ಶಿ ಗಿರೀಶ ಕರ್ಕಿ ಹಾಗೂ ಟ್ರಸ್ಟಿಗಳಾದ ಬಸವರಾಜ ಗಾರ್ಗಿ, ಅಣ್ಣಪ್ಪ ಕರ್ಕಿ ಮತ್ತು ತೀರ್ಪುಗಾರರಾದ ಡಾ. ಗುರುದೇವಿ ಉ. ಹುಲೆಪ್ಪನವರಮಠ ಉಪಸ್ಥಿತಿಯಲ್ಲಿ ೬೪ ಕವನ ಸಂಕಲನಗಳನ್ನು ಪರಿಶೀಲಿಸಲಾಯಿತು.
ಅವುಗಳಲ್ಲಿ ಗುಲಾಬಿ ಮತ್ತು ಪಾರಿವಾಳ ಕವನ ಸಂಕಲನಕ್ಕೆ ಕವಿ ಡಾ. ಕುಮಾರಚಲ್ಯ (ಸಿ.ಎಸ್. ಕುಮಾರಸ್ವಾಮಿ) ನಿವೃತ್ತ ಪ್ರಾಧ್ಯಾಪಕರು ಕುವೆಂಪು ವಿಶ್ವವಿದ್ಯಾಲಯ ಶಿವಮೊಗ್ಗ ಇವರ ಕೃತಿಗೆ ೨೦೨೦ ನೇ ಸಾಲಿನ ಕಾವ್ಯ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು.
ಪ್ರಶಸ್ತಿಯು ರೂ. ೫೦೦೦/- ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ: ೨೭-೧೨-೨೦೨೦ ರಂದು ಮಧ್ಯಾಹ್ನ ೧೨:೦೦ ಘಂಟೆಗೆ, ಪ್ಲಾಟ್ ನಂ. ೩೫೪, ’ಗಂಗೋತ್ರಿನಿವಾಸ’ ರಾಮತೀರ್ಥ ನಗರ, ಬೆಳಗಾವಿಯಲ್ಲಿ ಜರುಗಲಿದೆ ಎಂದು ಪ್ರತಿಷ್ಠಾನವು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ