
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನಲ್ಲಿ ನಡೆದ ಡಾ. ಪತ್ನಿ ಸಾವಿಗೆ ಡಾ. ಪತಿಯೇ ಕಾರಣ. ಪತ್ನಿ ಕೊಲೆ ಮಾಡಲು ಮತ್ತೋರ್ವ ಡಾ. ಜೊತೆ ಆರೋಪಿ ಸಂಬಂಧ ಹೊಂದಿರುವುದು ತನಿಖೆ ವೇಳೆ ಬಯಲಾಗಿದೆ.
ಆರೋಪಿ ಡಾ. ಮಹೇಂದ್ರ ರೆಡ್ಡಿ ಮತ್ತೋರ್ವ ಡಾಕ್ಟರ್ ಜತೆ ವಿವಾಹವೇತರ ಸಂಬಂಧ ಹೊಂದಿದ್ದನು. ಹೀಗಾಗಿಯೇ ಪತ್ನಿ ಡಾ. ಕೃತಿಕಾ ಕೊಲೆಗೆ ಮಾಸ್ಟರ್ ಪ್ಲಾನ್ ಹೆಣೆದಿದ್ದು ಅನಸ್ತೇಷಿಯಾ ಓವರ್ ಡೋಸ್ ನೀಡಿ ಕೊಲೆ ಮಾಡಲಾಗಿದೆ. ಪತಿಯೇ ಓವರ್ ಡೋಸ್ ನೀಡಿ ಹತ್ಯೆ ಮಾಡಿರೋದು ಪೊಲೀಸ್ ತನಿಖೆಯಲ್ಲಿ ಬಯಲಾಗತ್ತು.
ಡಾ. ಮಹೇಂದ್ರ ರೆಡ್ಡಿ ಅನೈತಿಕ ಸಂಬಂಧದ ಬಗ್ಗೆ ಮೃತ ಡಾ. ಕೃತಿಕಾ ಸಹೋದರಿ ಡಾ. ನಿಕಿತಾ ಮಾಹಿತಿ ನೀಡಿದ್ದು, ಆರೋಪಿ ಬಾವನ ನಿಜಬಣ್ಣ ಬಯಲು ಮಾಡಿದ್ದಾರೆ. ಕದ್ದು ಮುಚ್ಚಿ ಮತ್ತೋರ್ವ ಡಾಕ್ಟರ್ ಜತೆಯೇ ಡಾ. ಮಹೇಂದ್ರ ಓಡಾಡಿಕೊಂಡಿದ್ದನು. ತನ್ನ ಅನೈತಿಕ ಸಂಬಂಧ ಉಳಿಸಿಕೊಳ್ಳಲು ಹೀಗೆ ಮಾಡಿದ್ದಾನೆ. ಪ್ರಿ ಪ್ಲಾನ್ ಮಾಡಿ ಹತ್ಯೆ ಮಾಡಿದ್ದಾನೆ ಎಂದು ಡಾ. ನಿಕಿತಾ ಹೇಳಿದ್ದಾರೆ.
2024ರ ಮೇ 26ರಂದು ಡಾ.ಮಹೇಂದ್ರರೆಡ್ಡಿ ಮತ್ತು ಡಾ.ಕೃತಿಕಾರೆಡ್ಡಿ ವಿವಾಹವಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ.ಕೃತಿಕಾರೆಡ್ಡಿ ಅವರಿಗೆ ಕೆಲ ದಿನಗಳಿಂದ ಆರೋಗ್ಯ ಸಮಸ್ಯೆ ಎದುರಾಗಿತ್ತು. ಅಜೀರ್ಣ, ಗ್ಯಾಸ್ಟಿಕ್, ಲೋಶುಗರ್ ಸಮಸ್ಯೆಯಿಂದ ಬಳಲುತ್ತಿದ್ದರು. ಈ ವಿಷಯ ಮುಚ್ಚಿಟ್ಟು ಕುಟುಂಬಸ್ಥರು ಅದೇ ಆಸ್ಪತ್ರೆಯಲ್ಲಿ ಜನರಲ್ ಸರ್ಜನ್ ಆಗಿದ್ದ ಡಾ.ಮಹೇಂದ್ರರೆಡ್ಡಿಗೆ ಮದುವೆ ಮಾಡಿಕೊಟ್ಟಿದ್ದರು.
ಅನಾರೋಗ್ಯಕ್ಕೀಡಾಗಿದ್ದ ಪತ್ನಿಗೆ ತಾನೇ ಚಿಕಿತ್ಸೆ ಕೊಡುತ್ತಿದ್ದ ವೈದ್ಯ ಮಹೇಂದ್ರ ಈಗ ಇಂಜಕ್ಷನ್ ನೀಡಿ ಪತ್ನಿಯನ್ನು ಕೊಲೆ ಮಾಡಿದ್ದಾನೆ. ಪತ್ನಿ ಕೊಲೆ ಮಾಡಿಯೂ ಸಹಜವಾಗಿಯೇ ಪತ್ನುಉ ಕುಟುಂಬದವರ ಜೊತೆ ಮಾತಿಕೊಂಡಿದ್ದ, ಈಗ ಎಫ್ ಎಸ್ ಎಲ್ ವರದಿ ಬಹಿರಂಗಗೊಂಡ ಬೆನ್ನಲ್ಲೇ ವೈದ್ಯನೇ ಇಂಜಕ್ಷನ್ ಮೂಲಕ ಪತ್ನಿಯನ್ನು ಕೊಲೆಗೈರಿರುವುದು ದೃಢಪಟ್ಟಿದೆ.