ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೋನಾ ವಿಷಯದಲ್ಲೂ ರಾಜಕೀಯವೇ ತಮಗೆ ಮುಖ್ಯ ಮತ್ತು ಲಾಭ ಎನ್ನುವ ಕಾಂಗ್ರೆಸ್ಸಿಗರ ಮನಸ್ಥಿತಿಗೂ ಹಾಗೂ ರೋಮ್ ನ ಅಂದಿನ ದೊರೆ ನೀರೋಗೂ ವ್ಯತ್ಯಾಸವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.
ವಲಸೆ ಕಾರ್ಮಿಕರಿಗೆ ಉಚಿತ ಬಸ್ ವ್ಯವಸ್ಥೆಗಾಗಿ ಕೆಪಿಸಿಸಿ ವತಿಯಿಂದ 1 ಕೋಟಿ ರೂ ಚೆಕ್ ನೀಡಿರುವ ವಿಚಾರವಾಗಿ ಟ್ವಿಟರ್ ನಲ್ಲಿ ಗುಡುಗಿರುವ ಸಚಿವ ಸುಧಾಕರ್, ರೋಮ್ ಸಾಮ್ರಾಜ್ಯ ಹೊತ್ತಿ ಉರಿಯುತ್ತಿದ್ದಾಗ ಅಂದಿನ ರೋಮ್ ದೊರೆ ನೀರೋ ಪಿಟಿಲು ಬಾರಿಸುತ್ತಿದ್ದ ಎಂಬ ಮಾತಿದೆ. ಹಾಗೇ ಕೊರೋನಾ ವಿಷಯದಲ್ಲೂ ರಾಜಕೀಯವೇ ತಮಗೆ ಮುಖ್ಯ ಮತ್ತು ಲಾಭ ಎನ್ನುವ ಕಾಂಗ್ರೆಸ್ಸಿಗರ ಮನಸ್ಥಿತಿಗು ಹಾಗೂ ರೋಮ್ ನ ಅಂದಿನ ದೊರೆ ನೀರೋಗೂ ವ್ಯತ್ಯಾಸವಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ನವರು ಕಾರ್ಮಿಕರ ಬಸ್ ಮತ್ತು ಟ್ರೈನ್ ಚಾರ್ಜ್ ಕೊಡ್ತೀವಿ ಅಂತ ರೋಡ್ ರೋಡ್ನಲ್ಲಿನ ಓಡಾಟ ಹಾಗೂ ಅದರ ಜಾಹಿರಾತುಗಳನ್ನ ಕೊಟ್ಟಿರುವುದು ನೋಡಿದರೆ ಇದು ಭರ್ಜರಿ ಬಯಲುನಾಟಕ ಎಂದು ಗೊತ್ತಾಗುತ್ತೆ. ನಿಯಮದಂತೆ ಹಣ ಯಾರಿಗೆ ಕೊಡಬೇಕಿತ್ತೋ ಅವರಿಗೆ ಕೊಡುವುದು ಬಿಟ್ಟು ಊರೆಲ್ಲ ಕ್ಯಾಮೆರಾ ಮುಂದೆ ಕೊರೊನ ಮೀರುವ ಓಡಾಟ ,ಚೀರಾಟ ಮತ್ತು ಹಾರಾಟದ ಅಗತ್ಯವೇನಿತ್ತು ಎಂದು ಪ್ರೆಶ್ನಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ