Latest
ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ಡಾ.ಮಹೇಶ್ ಜೋಶಿ ಆಯ್ಕೆ (ಇಲ್ಲಿದೆ ಮತಗಳ ವಿವರ)

ಬುಧವಾರ ಅಧಿಕೃತ ಆದೇಶ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾಗಿ ದೂರದರ್ಶನದ ನಿವೃತ್ತ ನಿರ್ದೇಶಕ ಡಾ.ಮಹೇಶ ಜೋಶಿ ಆಯ್ಕೆಯಾಗಿದ್ದಾರೆ.
ಈ ಕುರಿತು ಬುಧವಾರ ಅಧಿಕೃತ ಆದೇಶ ಹೊರಬೀಳಲಿದೆ.
ಭಾನುವಾರ ನಡೆದ ಚುನಾವಣೆಯಲ್ಲಿ ಮಹೇಶ ಜೋಶಿ ಉಳಿದೆಲ್ಲ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತಗಳನ್ನು ಪಡೆದಿದ್ದಾರೆ. ಒಟ್ಟೂ 21 ಜನರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಚಲಾಯಿತ 1.59 ಲಕ್ಷ ಮತಗಳ ಪೈಕಿ 68,525 ಮತಗಳನ್ನು ಮಹೇಶ ಜೋಶಿ ಪಡೆದಿದ್ದಾರೆ. 2 ಸ್ಥಾನದಲ್ಲಿರುವ ಡಾ.ಶೇಖರಗೌಡ ಮಾಲಿ ಪಾಟೀಲ ಸುಮಾರು 22,357 ಸಾವಿರ ಮತಗಳನ್ನು ಪಡೆದಿದ್ದಾರೆ. ಹೊರನಾಡ ಕನ್ನಡಿಗರ ಮತಗಳ ಎಣಿಕೆ ಇನ್ನೂ ನಡೆಯಬೇಕಿದೆ.
ಬೆಳಗಾವಿಯಲ್ಲಿ ಮಹೇಶ್ ಜೋಶಿಗೆ ಅತ್ಯಧಿಕ ಮತ



