Belagavi NewsBelgaum NewsKannada NewsKarnataka NewsUncategorized

ಸಂತ ಮೀರಾ ಶಾಲೆಯಲ್ಲಿ ಯೋಗ ದಿನಾಚರಣೆ

ಪ್ರವತಿವಾಹಿನಿ ಸುದ್ದಿ, ಬೆಳಗಾವಿ: 10 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅನಗೋಳದ ಆರೋಗ್ಯ ಭಾರತಿ ಬೆಳಗಾವಿ ಶಾಖೆಯಿಂದ ಸಂತ ಮೀರಾ ಶಾಲೆಯ ಮಾಧವ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿತ್ತು.

ಅಂತರಾಷ್ಟ್ರೀಯ ಯೋಗ ದಿನದ ನಿಮಿತ್ಯ ಬೆಳಿಗ್ಗೆ 6 ಗಂಟೆಗೆ ಓಂಕಾರ, ದೀಪ ಪ್ರಜ್ವಲನೆ, ಪುಷ್ಪಾರ್ಚನೆ, ಮಾಡಲಾಯಿತು.  ಮುಖ್ಯ ಅತಿಥಿಗಳಾಗಿ ವೈದ್ಯೆ, ಸಾಮಾಜಿಕ ಕಾರ್ಯಕರ್ತೆ ಡಾ. ಸೋನಾಲಿ ಸರ್ನೋಬತ್ ಅವರು ಯೋಗ ಪ್ರದರ್ಶಿಸಿದರು‌. 

ನಂತರ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಡಾ.ಸೋನಾಲಿ ಸರ್ನೋಬತ್ ಅವರು, ಆರೋಗ್ಯವನ್ನು ಕಾಪಾಡಿಕೊಳ್ಳಲು ಇಂದು ಅಷ್ಟಾಂಗ ಯೋಗವು ಅತ್ಯಂತ ಅವಶ್ಯಕವಾಗಿದೆ. ಆಹಾರ ಪದ್ಧತಿಯನ್ನು ಬದಲಾಯಿಸುವುದು ಮುಖ್ಯ, ನಮ್ಮ ದೈನಂದಿನ ಜೀವನದಲ್ಲಿ ಸಾಂಪ್ರದಾಯಿಕ ಆಹಾರವನ್ನು ಸೇವಿಸದೆ ಬೇರೆ ಮಾರ್ಗವಿಲ್ಲ, ನಮ್ಮ ಸುತ್ತಮುತ್ತಲಿನ ಹಣ್ಣುಗಳು, ಧಾನ್ಯಗಳು ಮತ್ತು ಆಹಾರವನ್ನು ಬಳಸಬೇಕು. ಪಾಶ್ಚಿಮಾತ್ಯರ ಕುರುಡು ಅನುಕರಣೆ ಬಿಟ್ಟು ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು. 

ಬೆಳಗಾವಿ ವಿಭಾಗದ ಸಂಯೋಜಕರಾದ ವಾಸುದೇವ್‌ ಸ್ವಾಗತಿಸಿ, ಬೆಳಗಾವಿ ಆರೋಗ್ಯ ಭಾರತಿಯ ಜಿಲ್ಲಾ ಉಪಾಧ್ಯಕ್ಷೆ ಹೇಮಾ ಅಂಬೇವಂಡಿಕರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೇಮಾ ಅಂಬೇವಂಡಿಕರ್, ಸೋನಿಯಾ ಸರೋದೆ ಮತ್ತು ಸುವರ್ಣಾ ಪಾಟೀಲ್ ಸ್ವಾಗತ ಗೀತೆ ಹಾಡಿದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button