*ಶ್ರೀಶೈಲ ಇಂಗಳಗಿ ನಿಧನಕ್ಕೆ ಡಾ. ಪ್ರಭಾಕರ ಕೋರೆ ಶೋಕ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಇತ್ತೀಚಿಗೆ ನಿಧನರಾದ ಕೆಎಲ್‌ಇ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಗಣ್ಯವರ್ತಕರಾಗಿದ್ದ ಮೂಲತಃ ಜಮಖಂಡಿಯವರಾದ ದಿವಂಗತ ಶ್ರೀಶೈಲ ಶಿವಲಿಂಗಪ್ಪ ಇಂಗಳಗಿ ಅವರಿಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆಯವರು ಶೋಕ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಅವರು ನುಡಿನಮನ ಸಲ್ಲಿಸಿ ಕೆಎಲ್‌ಇ ಸಂಸ್ಥೆಯ ಮಾಜಿ ಉಪಾಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಅನುಪಮವೆನಿಸಿದೆ. ಸಂಸ್ಥೆಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಸಂಯೋಚಿತ ಮಾರ್ಗದರ್ಶನ ಮಾಡಿ ಸಂಸ್ಥೆಗೆ ಬಹುಮೌಲಿಕ ಕೊಡುಗೆ ನೀಡಿದ್ದರು.
ಬಹುಮುಖ ವ್ಯಕ್ತಿತ್ವದ ಶ್ರೀಶೈಲ ಇಂಗಳಗಿಯವರು ಉದ್ಯಮಿಗಳಾಗಿ, ಕಬ್ಬಿನ ವ್ಯಾಪಾರ ಹಾಗೂ ಸರಾಫಿ ವರ್ತಕರಾಗಿ, ಜಮಖಂಡಿಯ ಪ್ರತಿಷ್ಠಿತ ಅರ್ಬನ್ ಬ್ಯಾಂಕಿನ ಮಾಜಿ ನಿರ್ದೇಶಕರಾಗಿ, ನಗರ ಸಭೆಯ ಮಾಜಿ ಸದಸ್ಯರಾಗಿ, ಪ್ರಸ್ತುತ ಜಮಖಂಡಿಯ ಡಾ. ಪ್ರಭಾಕರ ಕೋರೆ ಕೋ-ಅಪರೇಟಿವ್ ಶಾಖಾ ಬ್ಯಾಂಕಿನ ಅಧ್ಯಕ್ಷರಾಗಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದನ್ನು ಸಮಾಜ ಮರೆಯುವಂತಿಲ್ಲ.
ಸರಳ ಸಜ್ಜನ, ಸ್ನೇಹ ಹೃದಯಿ, ಶ್ರೀಶೈಲ ಇಂಗಳಗಿಯವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಅವರ ಅಗಲಿಕೆಯ ದು:ಖವನ್ನು ಸಹಿಸಿಕೊಳ್ಳುವ ಶಕ್ತಿ ಪರಮಾತ್ಮನು ಕುಟುಂಬಕ್ಕೆ ನೀಡಲಿ, ಅವರ ದಿವ್ಯಚೇತನಕ್ಕೆ ಶಾಂತಿಯನ್ನು ಕರುಣಿಸಲೆಂದು ಡಾ. ಪ್ರಭಾಕರ ಕೋರೆಯವರು ಸಮಸ್ತ ಕೆ.ಎಲ್.ಇ ಪರಿವಾರದ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.