Belagavi NewsBelgaum NewsKannada NewsKarnataka NewsLatestPolitics
*ನಿರಾಶದಾಯಕ ಬಜೆಟ್: ಡಾ. ಪ್ರಭಾಕರ್ ಕೋರೆ*
ಪ್ರಗತಿವಾಹಿನಿ ಸುದ್ದಿ: ಗ್ಯಾರೆಂಟಿಗಳ ಭರಾಟೆಯಲ್ಲಿ ಸಿದ್ದರಾಮಯ್ಯನವರ ಸರಕಾರ ರಾಜ್ಯದ ಜನತೆಗೆ ಕೇವಲ ಆಶ್ವಾಸನೆಗಳನ್ನು ನೀಡಿದೆ. ಕೃಷಿ, ಆರೋಗ್ಯ,ಸಹಕಾರ ಹಾಗೂ ನೀರಾವರಿ ಕ್ಷೇತ್ರಗಳಿಗೆ ಕೊಡ ಬೇಕಾದಂತಹ ಪ್ರಮುಖ ಆದ್ಯತೆಗಳನ್ನು ನೀಡಿಲ್ಲ ಎಂದು ಬಜೆಟ್ ಬಗ್ಗೆ ಕೆ.ಎಲ್.ಇ ಸಂಸ್ಥೆ ಮುಖ್ಯಸ್ಥ ಡಾ.ಪ್ರಭಾಕರ ಕೋರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಸುದೀರ್ಘ ಬಜೆಟ್ ಮೂಲಕ ಜನತೆಯ ಮೂಗಿಗೆ ತುಪ್ಪವನ್ನು ಸವರಿದ್ದಾರೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಇದೊಂದು ನಿರಾಶದಾಯಕವಾದ ಬಜೆಟ್. ಪ್ರಗತಿಯ ನಾಗಾಲೋಟದಲ್ಲಿ ಸಾಗಬೇಕಾದಂತಹ ರಾಜ್ಯ ಹಲವಾರು ಗ್ಯಾರಂಟಿಗಳ ಭರದಲ್ಲಿ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದೆ. ಇದು ಪ್ರಗತಿದಾಯಕವಲ್ಲ ಎಂದು ತಿಳಿಸಿದ್ದಾರೆ.




