ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ವಿಶೇಷ ಚೇತನ ವಿದ್ಯಾರ್ಥಿಯಾಗಿರುವ ಶಿವಾನಂದ ಸುಂಕದನಿಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆಯವರು ಲ್ಯಾಪ್‌ಟಾಪ್‌ನ್ನು ನೀಡುವ ಮೂಲಕ ಪ್ರೋತ್ಸಾಹಿಸಿದ್ದಾರೆ.
ಗದಗದ ಬಡ ರೈತನ ಮಗನಾಗಿರುವ ಶಿವಾನಂದ ಸುಂಕದ ಬಾಲ್ಯದಲ್ಲಿಯೇ ಪೋಲೀಯೊದಿಂದ ಎರಡು ಕಾಲುಗಳನ್ನು ಕಳೆದುಕೊಂಡು, ಆದರೆ ಜಾಣ ವಿದ್ಯಾರ್ಥಿ ಶಿವಾನಂದ ಅತ್ಯಂತ ಕಷ್ಟದಲ್ಲಿಯೇ ಅಂಗವೈಕ್ಯಲ್ಯತೆಯನ್ನು ಸವಾಲನ್ನಾಗಿ ಸ್ವೀಕರಿಸಿ ಸಾಧನೆಯನ್ನು ಮಾಡಿದವನು.
ಗದಗದಲ್ಲಿರುವ ಕೆಎಲ್‌ಇ ಸಂಸ್ಥೆಯ ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಬಿ.ಕಾಂ. ಪದವಿಯನ್ನು ಪೂರೈಸಿರುವ ಶಿವಾನಂದ ಸದ್ಯ ಧಾರವಾಡದ ಸರ್ ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದಲ್ಲಿ ಮೊದಲ ಸೆಮಿಸ್ಟರ್ ಕಾನೂನು ಪದವಿಯನ್ನು ಓದುತ್ತಿದ್ದಾನೆ.
ಕಲಿಕೆಯಲ್ಲಿಯರುವ ಅವನ ಆಸಕ್ತಿ ಹಾಗೂ ಹುಮ್ಮಸ್ಸುಗಳನ್ನು ಗುರುತಿಸಿ ಡಾ.ಕೋರೆಯವರು ಇಂತಹ ವಿದ್ಯಾರ್ಥಿಗಳು ಸಮಾಜದ ಸಂಖ್ಯ ಮಕ್ಕಳಿಗೆ ಪ್ರೇರಕರಾಗಿದ್ದಾರೆ. ಓದಿಗೆ ಹಾಗೂ ಸಾಧನೆಗೆ ಅಂಗವೈಕ್ಯಲ್ಯತೆ ಅಡ್ಡಿಯಾಗಲಾರದು ಎಂದು ಹೇಳುವ ಮೂಲಕ ಶಿವಾನಂದನ ಇಷ್ಟದಂತೆಯೆ ಲ್ಯಾಪ್‌ಟಾಪ್‌ನ್ನು ಕೊಡಮಾಡಿ ಕಲಿಕೆಗೆ ಪ್ರೋತ್ಸಾಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ