EducationKannada NewsKarnataka News

*201 ವಿದ್ಯಾರ್ಥಿಗಳಿಗೆ 1 ಕೋಟಿ ರೂ. ವಿದ್ಯಾರ್ಥಿವೇತನ ನೀಡಿದ ಕಾನ್ಫಿಡೆಂಟ್ ಗ್ರೂಪ್‌ನ ಡಾ. ರಾಯ್ ಸಿ ಜೆ*

ಪ್ರಗತಿವಾಹಿನಿ ಸುದ್ದಿ: ಬದಲಾವಣೆಗೆ ಶಿಕ್ಷಣವೇ ಪ್ರಮುಖ ಸಾಧನ ಎಂಬ ನಂಬಿಕೆಯನ್ನು ಹೊಂದಿರುವ ಕಾನ್ಫಿಡೆಂಟ್‌ ಗ್ರೂಪ್‌ನ ದೃಷ್ಟಾರ ಡಾ. ರಾಯ್ ಸಿ.ಜೆ ಅವರು ಕರ್ನಾಟಕ ಮತ್ತು ಕೇರಳದ 201 ಅರ್ಹ ವಿದ್ಯಾರ್ಥಿಗಳಿಗೆ 1 ಕೋಟಿ ರೂ. ವಿದ್ಯಾರ್ಥಿವೇತನವನ್ನು ನೀಡಿದ್ದಾರೆ.

ಇದು ಅವರ ದತ್ತಿ ಕಾರ್ಯಕ್ರಮದ ಅತ್ಯಂತ ಮಹತ್ವದ ಕೊಡುಗೆಯಾಗಿದ್ದು, ವ್ಯಕ್ತಿಯ ಬೆಳವಣಿಗೆಗೆ ಶಿಕ್ಷಣ ಕೇವಲ ಒಂದು ಪರಿಕರವಲ್ಲ, ಇಡೀ ದೇಶಕ್ಕೆ ಒಂದು ಸುಭದ್ರ ಅಡಿಪಾಯ ಎಂದು ಅವರು ನಂಬಿದ್ದಾರೆ.

ಈ ವಿದ್ಯಾರ್ಥಿ ವೇತನವು ಕಾರ್ಪೊರೇಟ್ ಯೋಜನೆಯಲ್ಲ. ಇದು ಅವರ ವೈಯಕ್ತಿಕ ಕೊಡುಗೆ. ಶಿಕ್ಷಣ ಪಡೆಯುವ ಅರ್ಹತೆ ಹೊಂದಿರುವ ಯಾವುದೇ ವಿದ್ಯಾರ್ಥಿಯೂ ಕೂಡಾ ಹಣಕಾಸಿನ ಪರಿಸ್ಥಿತಿಯ ಕಾರಣಕ್ಕೆ ಹಿಂದುಳಿಯುವಂತಿಲ್ಲ ಎಂದು ನಾನು ಬಲವಾಗಿ ನಂಬಿದ್ದೇನೆ. ಇದೇ ಕಾರಣಕ್ಕೆ ನಾವು ಈ ಉದ್ದೇಶಕ್ಕೆ ನಮ್ಮ ಕುಟುಂಬದ ಹಣವನ್ನು ಮೀಸಲಿಟ್ಟಿದ್ದೇವೆ ಎಂದು ಕಾನ್ಫಿಡೆಂಟ್‌ ಗ್ರೂಪ್‌ನ ಸಂಸ್ಥಾಪಕ ಮತ್ತು ಚೇರ್ಮನ್ ಡಾ. ರಾಯ್ ಸಿ.ಜೆ. ಹೇಳಿದ್ದಾರೆ.

“ಮಗುವಿನ ಶಿಕ್ಷಣದಲ್ಲಿ ನಾವು ಹೂಡಿಕೆ ಮಾಡಿದಾಗ ಇದು ನಮ್ಮ ಕುಟುಂಬದ ನಂಬಿಕೆಯ ಮೇಲೂ ಪ್ರಭಾವ ಬೀರುತ್ತದೆ. ನಾವು ಸಮಾಜದ ಭವಿಷ್ಯಕ್ಕಾಗಿ ಹೂಡಿಕೆ ಮಾಡುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ. ಅವರು ಶಿಕ್ಷಣದ ಹೊರತಾಗಿಯೂ ಇತರ ವಲಯದಲ್ಲೂ ಗಮನ ಹರಿಸಿದ್ದಾರೆ. ಆರೋಗ್ಯ ಸೇವೆ, ಮಹಿಳಾ ಸಬಲೀಕರಣ ಮತ್ತು ಅಂಗವಿಕಲರಿಗೆ ಬೆಂಬಲ ಸೇರಿದಂತೆ ಹಲವು ವಲಯಕ್ಕೆ ಅವರು ಕೊಡುಗೆ ನೀಡುತ್ತಾರೆ.

Home add -Advt

ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು ಎಂದು ಬಯಸುವ ಡಾ. ರಾಯ್ ಸಿ.ಜೆ ಅವರು ಬದಲಾವಣೆಗೆ ಶಿಕ್ಷಣವೇ ಪ್ರಮುಖ ಎಂದು ನಂಬಿದ್ದಾರೆ. ಸರ್ಕಾರಿ ಮಾನ್ಯತೆಯ ಶಾಲೆಗಳಲ್ಲಿ 8 ರಿಂದ 10ನೇ ತರಗತಿಯವರೆಗೆ ಓದುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್ ನೀಡಲಾಗುತ್ತದೆ. ಆಯ್ಕೆಯಾದ ಪ್ರತಿ ವಿದ್ಯಾರ್ಥಿಗೂ 50 ಸಾವಿರ ರೂ. ಅಥವಾ ಅವರ ಶಾಲೆ ಶುಲ್ಕಕ್ಕೆ ಸಮಾನವಾದ ಮೊತ್ತದ ವಿದ್ಯಾರ್ಥಿವೇತನ ನೀಡಲಾಗುತ್ತದೆ.

ಈ ವಿದ್ಯಾರ್ಥಿವೇತನಕ್ಕೆ ಅರ್ಹತೆ ಪಡೆಯಲು ಪಾಲಕರ ವಾರ್ಷಿಕ ಆದಾಯ 5 ಲಕ್ಷಕ್ಕಿಂತ ಕಡಿಮೆ ಇರಬೇಕು, ಹಿಂದಿನ ಶೈಕ್ಷಣಿಕ ವರ್ಷದ ಅಂತಿಮ ಪರೀಕ್ಷೆಯಲ್ಲಿ 80% ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರಬೇಕು. ಅಷ್ಟೇ ಅಲ್ಲ, ಒಂದೇ ಕುಟುಂಬದಲ್ಲಿರುವ ಗರಿಷ್ಟ ಎರಡು ಮಕ್ಕಳು ಈ ಯೋಜನೆ ಅಡಿಯಲ್ಲಿ ಅರ್ಹತೆ ಪಡೆಯಬಹುದಾಗಿದ್ದು, ಈ ಎಲ್ಲ ಮಾನದಂಡಗಳನ್ನೂ ಅವರು ಪೂರೈಸಿಬೇಕು.

ಮುಂದಿನ ದಿನಗಳಲ್ಲಿ ಡಾ. ರಾಯ್. ಸಿ.ಜೆ ಅವರು ಈ ಕಾರ್ಯಕ್ರಮವನ್ನು ಇನ್ನಷ್ಟು ವಿಸ್ತರಿಸುವ ನಿರೀಕ್ಷೆಯಿದ್ದು, 2026 ರಲ್ಲಿ 300 ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿ ಹೊಂದಿದ್ದಾರೆ.

Related Articles

Back to top button