
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಣಕುಂಬಿಯ ಮಾವುಲಿ ದೇವಸ್ಥಾನದ ಆವರಣದಲ್ಲಿ ನವೀಕರಣಗೊಂಡಿರುವ ಗಣಪತಿ ದೇವಸ್ಥಾನವನ್ನು ಸಾಮಾಜಿಕ ಕಾರ್ಯಕರ್ತೆ, ನಿಯತಿ ಫೌಂಡೇಶನ್ ಚೇರಮನ್ ಡಾ ಸೋನಾಲಿ ಸರ್ನೋಬತ್ ಉದ್ಘಾಟಿಸಿದರು.


ಡಾ ಸೋನಾಲಿ ಸರ್ನೋಬತ್ ಅವರು ಮಾವುಲಿ ದೇವಿ ಟ್ರಸ್ಟ್‌ಗೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಟ್ರಸ್ಟಿ ರಘುನಾಥ ದಳವಿ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ನಂತರ ಡಾ. ಸೋನಾಲಿ ಸರ್ನೋಬತ್ ಮತ್ತಿತರರು ಚಿಗುಲೆಗೆ ಭೇಟಿ ನೀಡಿದರು. ಅಲ್ಲಿ ಮಾರ್ತಾಬಾಯಿ ದೇವಸ್ಥಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದರು.
ಡಾ.ಸರ್ನೋಬತ್ ಅವರು ವಕೀಲ ರಾಜು ಬಾಗೇವಾಡಿ ಅವರೊಂದಿಗೆ ಸಂಪರ್ಕ ರಸ್ತೆ ಮತ್ತು ಮೊಬೈಲ್ ಟವರ್‌ಗಳ ಕುರಿತು ಹಾಗೂ ಗ್ರಾಮಸ್ಥರ ಸಮಸ್ಯೆಗಳನ್ನು ಚರ್ಚಿಸಿದರು.
https://pragati.taskdun.com/cm-basavaraj-bommaireactiongovt-projectcampaign/