Kannada NewsKarnataka News

ಕೆರೆಯಲ್ಲಿ ಮುಳುಗಿ ಮೃತಪಟ್ಟ ಯುವಕನ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿದ ಡಾ.ಸೋನಾಲಿ ಸರ್ನೋಬತ್

 

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಖಾನಾಪುರ ತಾಲೂಕಿನ ಭುರಣಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಾಸ್ಕೆನಟ್ಟಿ ಹತ್ತಿರದ   (ಸೊನ್ಯಾನಟ್ಟಿ) ಗ್ರಾಮದಲ್ಲಿ ಏಳು ದಿನಗಳ ಹಿಂದೆ ಮಾನಸಿಕ ವ್ಯಕ್ತಿಯೋರ್ವ ಕೆರೆಯಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.

ಗ್ರಾಮದ 27 ವರ್ಷದ ಜಾನು ವಿಠ್ಠಲ ಜಗಳೆ ಮೃತಪಟ್ಟವರು.  ಈ ವಿಷಯ ತಿಳಿದು ಸ್ಥಳಕ್ಕೆ ಮೃತ ಯುವಕನ ಮನೆಗೆ ತೆರಳಿದ ಖಾನಾಪುರ ತಾಲೂಕಿನ ಬಿಜೆಪಿ ಪ್ರಭಾರಿ ಡಾ. ಸೋನಾಲಿ ಸರ್ನೋಬತ್ ಅವರು ಮೃತಪಟ್ಟ ಕುಟುಂಬಕ್ಕೆ ನಿಯತಿ ಫೌಂಡೇಶನ್ ವತಿಯಿಂದ ಆರ್ಥಿಕ ಸಹಾಯ ಮಾಡಿದರು.

Home add -Advt

ಈ ಸಂದರ್ಭದಲ್ಲಿ ಮಾತನಾಡಿದ ಅವರು ಮುಂಬರುವ ದಿನಗಳಲ್ಲಿ ನಮ್ಮ ನಿಯತಿ ಫೌಂಡೇಶನ್ ವತಿಯಿಂದ ಮತ್ತಷ್ಟು ಸಹಾಯ ಮಾಡುತ್ತೇನೆ. ಹಾಗೂ ಈ ಬಡ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಬಸವರಾಜ ‌ಕಡೆಮನಿ, ಈಶ್ವರ್ ಸಾನಿಕೊಪ್ಪ, ಕುಶ ಅಂಬೋಜಿ, ನಾಗೇಶ ರಾಮಜಿ, ಪ್ರವಿನ ಪಾಟೀಲ್, ಅರುಣ ಪರಸನ್ನವರ, ಸಂತೋಷ್ ಕುರಬರ,  ಕುಮಾರ್ ಚವ್ವನ್ನವರ,  ಮಹೇಶ್ ಗುರವ, ರುದ್ರಪ್ಪ ಬೆಂಡಿಗೇರಿ, ಸಂದೀಪ್ ತಿಪ್ಪನ್ನವರ್ ಇನ್ನಿತರ ಗ್ರಾಮಸ್ಥರು ಉಪಸ್ಥಿತರಿದ್ದರು.

ಸ್ಥಳೀಯರಿಗೆ ಉದ್ಯೋಗ ಸಂಬಂಧ ಸೂಕ್ತ ನಿಯಮಾವಳಿ ರೂಪಿಸಿ – ಕಾರ್ಮಿಕ ಸಚಿವರಿಗೆ ಡಾ.ಸೋನಾಲಿ ಸರ್ನೋಬತ್ ಮನವಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button