Latest

ಇತಿಹಾಸದಲ್ಲಿ ಕಂಡರಿಯದ ರೌದ್ರಾವತಾರತಾಳಿದ ಮಳೆ; ಬೆಂಗಳೂರಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥ; ಸರಣಿ ಟ್ವೀಟ್ ಮಾಡಿ ಸಚಿವರು ಹೇಳಿದ್ದೇನು?

ಪ್ರಗತಿವಾಹಿನಿ ಸುದ್ದಿ;  ಬೆಗಳೂರು: 75 ವರ್ಷಗಳಲ್ಲೇ ದಾಖಲೆ ಪ್ರಮಾಣದಲ್ಲಿ ಮಖೆಯಾಗುತ್ತಿರುವ ರಾಜಧಾನಿ ಬೆಂಗಳೂರಿನಲ್ಲಿ ಪ್ರವಾಹ ಪರಿಸ್ಥಿತಿಯುಂಟಾಗಿದ್ದು, ಜನಜೀವನ ಸಂಪೂರ್ಣ ಅಸ್ಥವ್ಯಸ್ಥಗೊಂಡಿದೆ. ರಾಜ್ಯ ಸರ್ಕಾರ ಸವಾಲಿನ ಜತೆಗೆ ವಿಪಕ್ಷಗಳ, ಸಾರ್ವಜನಿಕರ ಟೀಕೆಗಳನ್ನು ಎದುರಸಬೇಕಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಹಾಗೂ ನಾಗರಿಕರು ಒಗ್ಗಟ್ಟಿನಿಂದ ಸವಾಲು ಎದುರಿಸಬೇಕು ಹೊರತು ನಿಂದಿಸುವ ಸಮಯವಲ್ಲ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಇತಿಹಾಸದಲ್ಲಿ ಕಂಡರಿಯದ ರೌದ್ರಾವತಾರತಾಳಿದ ಮಳೆಯಿಂದ ಬೆಂಗಳೂರು ಅಸ್ಥವ್ಯಸ್ತವಾಗಿರುವಿದು ಸತ್ಯ. ಈ ಸಂಕಷ್ಟದ ಕಾಲದಲ್ಲಿ ಸರಕಾರ ಹಾಗು ನಾಗರಿಕರು ಒಟ್ಟಾಗಿ ಸವಾಲನ್ನು ಎದುರಿಸಬೇಕೆಹೊರತು ನಿಂದಿಸುವ ಸಮಯವಲ್ಲ. ಈ ರೀತಿಯ ಮಳೆ ಪ್ರಪಂಚದ ಯಾವುದೇ ನಗರದ್ಲಲಿ ಬಿದ್ದಿದ್ದೇ ಆದಲ್ಲಿ ಪರಿಸ್ಥಿತಿ ಇದಕ್ಕಿನ್ನ ಭಿನ್ನವಾಗಿರುವುದಿಲ್ಲ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿಯವರು ಹಾಗೂ ಬೆಂಗಳೂರಿನ ಸಚಿವರುಗಳು, ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ವಿವಿಧ ಸಂಘಸಂಸ್ಥೆಗಳು ಸಕ್ರಿಯವಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ. ನಮ್ಮ ಕೆಂಪೇಗೌಡರು ಕಟ್ಟಿದ ಸುಂದರ ಹಾಗು ಎಲ್ಲರನ್ನೊಳಗಂಡ ಚಿಕ್ಕದಾದ ಹಾಗು ಚೊಕ್ಕದಾದ ಬೆಂಗಳೂರು ಇವತ್ತು ಅಭಿವೃದ್ಧಿಯ ಹೆಸರಲ್ಲಿ ಬೃಹತ್ ಮಹಾನಗರ ಆಗಿದೆ. ಆಗ ನಿರ್ಮಿಸಿದ ಕೆರೆಗಳು ಇಂದು ಒತ್ತುವರಿಯಾಗಿ ಮಾಯವಾಗಿದೆ. ರಾಜಕಾಲುವೆಗಳ ಮೇಲೆ ಮನೆಗಳು ಮಳಿಗೆಗಳು ನಿರ್ಮಾಣವಾಗಿದೆ. ಕೆಲವು ಕೆರೆಗಳ ಅಂಗಳದಲ್ಲಿ, ತಗ್ಗು ಪ್ರದೇಶದಲ್ಲಿ ಮನೆಗಳ ಲೇಔಟ್ ನಿರ್ಮಾಣಮಾಡಿಕೊಡಿದ್ದಾರೆ. ಇಂತ ಬಳುವಳಿಯನ್ನ ನಮ್ಮ ಸರ್ಕಾರ ಪಡೆದಿದೆ. ಆದರೂ ನಮ್ಮ ಸರಕಾರ ಇದನ್ನು ಸವಾಲಾಗಿ ಸ್ವೀಕರಿಸಿ ಶೀಘ್ರ ಶಾಶ್ವತ ಪರಿಹಾರವನ್ನು ನೀಡ್ತೇವಿ ಎಂದು ಭರವಸೆ ನೀಡಿದ್ದಾರೆ.

ಅವೈಜ್ಞಾನಿಕವಾಗಿ ನೂರಾರು ಹಳ್ಳಿಗಳನ್ನು ಗ್ರೇಟರ್ ಬೆಂಗಳೂರಿಗೆ ಸೇರಿಸಿ ಯಾವುದೇ ಅಭಿವೃದ್ದಿಯನ್ನ ಈ ಗ್ರಾಮಗಳಲ್ಲಿ ಮಾಡದಿರುವುದು ಯಾರ ತಪ್ಪು ? ಇನ್ನು ಮೋಹನದಾಸ್ ಪೈ ಯವರೇ ಈ ಪರಿಯ ಮಳೆ ನ್ಯೂಯೋರ್ಕ್ ನಲ್ಲಿ ಬಿದ್ದಿದ್ರೆ ಏನಾಗ್ತಾಯಿತ್ತು? ಸಹನೆ ಹಾಗು ಸತ್ಯಾನ್ವೇಷಣೆಗೆ ಮನ್ನಣೆ ಕೊಡಿ. ದೂರುವುದು ಸುಲಭ ಪರಿಹರಿಸುವುದು ದೂರದ ಮಾತು. ಇವು ಜಾಗತಿಕ ತಾಪಮಾನ ವ್ಯಪರೀತ್ಯದ ಕೆಲವು ಕೊಡುಗೆಗಳು. ಹಾಗಾಗಿ ನಾವೆಲ್ಲಾ ಒಟ್ಟಾಗಿ ಉತ್ತಮ ಹಾಗು ನಿರ್ಮಲವಾದ ಪರಿಸರಪೂರಕ ನಗರಾಭಿವೃದ್ದಿಗೆ ನಾಂದಿಹಾಡೋಣ. ಪ್ರಕೃತಿ ನಮ್ಮ ಅಗತ್ಯಗಳಿಗೆ ಎಲ್ಲವು ಕೊಡುತ್ತೆ ಆದರೆ ನಮ್ಮ ದುರಾಸೆಗೆ ಅದರ ವಿಕೃತಿಯ ದರ್ಶನವಾಗುತ್ತೆ. ಎಚ್ಚರ…ಎಚ್ಚರ…ಎಂದು ಸರಣಿ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button