Belagavi NewsBelgaum NewsHealthKannada NewsKarnataka NewsLatest

*ಬೆಳಗಾವಿಯಲ್ಲಿ ಡಾ. ವೆಂಕಟರಮಣ ಹೆಗಡೆಯವರ ಉಚಿತ ಶಿಬಿರ*

ಪ್ರಗತಿವಾಹಿನಿ ಸುದ್ದಿ, *ಬೆಳಗಾವಿ:* ನಿಸರ್ಗ ಮನೆ ವತಿಯಿಂದ ಆಯೋಜಿಸಿರುವ ನೈಸರ್ಗಿಕ ಆರೋಗ್ಯ ಶಿಬಿರದಲ್ಲಿ ಖ್ಯಾತ ನಿಸರ್ಗೋಪಚಾರ ತಜ್ಞ ಡಾ. ವೆಂಕಟರಮಣ ಹೆಗಡೆಯವರು ಜೂನ್ 27 ಮತ್ತು 28 ರಂದು ಬೆಳಗಾವಿಯಲ್ಲಿ ಉಚಿತ ಮುಖತಃ ಭೇಟಿಗೆ ಲಭ್ಯರಿರುತ್ತಾರೆ. ಸಂದರ್ಶನ ಸಂಪೂರ್ಣ ಉಚಿತವಾಗಿರುತ್ತದೆ.

Home add -Advt

ಕ್ಯಾಂಪ್ ಪ್ರದೇಶದಲ್ಲಿರುವ ಹೋಟೆಲ್ ಹೆರಿಟೇಜ್, ಬೆಳಗಾವಿಯಲ್ಲಿ ನಡೆಯುವ ಈ ಶಿಬಿರದಲ್ಲಿ ಮೂಳೆ ಮತ್ತು ಮೈಕೀಲು ನೋವುಗಳಾದ ಹೊಟ್ಟೆ ನೋವು, ಕತ್ತು ನೋವು, ಮೊಣಕಾಲು ನೋವು, ಸ್ನಾಯು ನೋವಿನ ಚಿಕಿತ್ಸೆ, ಮಧುಮೇಹ ನಿಯಂತ್ರಣ, ತೂಕ ಇಳಿಕೆ ಮತ್ತು ಲಿವರ್ ಡಿಟಾಕ್ಸ್ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ.

ಯೋಗ ಮತ್ತು ಧ್ಯಾನ ತರಬೇತಿ, ಅಸಿಡಿಟಿ, ಅಲರ್ಜಿ ಮತ್ತು ಗ್ಯಾಸ್ಟ್ರಿಟಿಸ್ ಚಿಕಿತ್ಸೆ, ಸಮತೋಲನ ಆಹಾರ ಮಾರ್ಗದರ್ಶನ, ಆರೋಗ್ಯಕರ ಜೀವನಶೈಲಿ ರೂಢಿಸುವ ಕುರಿತು ಡಾ. ಹೆಗಡೆಯವರು ಸಲಹೆ ನೀಡಲಿದ್ದಾರೆ.

ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ 9632867180, 9353981093 ಸಂಖ್ಯೆಗಳನ್ನು ಸಂಪರ್ಕಿಸಬಹುದು.

Related Articles

Back to top button