ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕನ್ನಡದ ಪ್ರಖ್ಯಾತ ಲೇಖಕರೂ ಶ್ರೇಷ್ಠ ಅನುವಾದಕರೂ ಆಗಿರುವ ಡಾ ವಿಠ್ಠಲರಾವ್ ಗಾಯಕ್ವಾಡ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2019 ರ ಅನುವಾದ ಸಾಹಿತ್ಯ ಪ್ರಶಸ್ತಿಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ ಚಂದ್ರಶೇಖರ ಕಂಬಾರ ಅವರು ನವದೆಹಲಿಯಲ್ಲಿ ವಿತರಿಸಿದರು.
ಡಾ ಗಾಯಕ್ವಾಡ್ ಅವರು ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ‘ದಲಿತ ಸಾಹಿತ್ಯದ ಸೌಂದರ್ಯ ಶಾಸ್ತ್ರ’ ಕೃತಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ.ಮೂಲ ಮರಾಠಿಯಲ್ಲಿ ಇದನ್ನು ಸುಪ್ರಸಿದ್ಧ ದಲಿತ ಲೇಖಕರಾದ ಶರಣಕುಮಾರ ಲಿಂಬಾಳೆಯವರು ಬರೆದಿದ್ದು ಕನ್ನಡ ಅನುವಾದ ಕೃತಿಯನ್ನು ಪ್ರಸಿದ್ದ ಪ್ರಕಾಶನ ಸಂಸ್ಥೆಯಾಗಿರುವ ಹೊಸಪೇಟೆಯ ಯಾಜಿ ಪ್ರಕಾಶನವು ಪ್ರಕಟಿಸಿದೆ.
ಕೇಂದ್ರ ಸಾಹಿತ್ಯ ಅಕಾಡೆಮಿಯು ನೀಡುವ ಈ ಪ್ರಶಸ್ತಿಯು ಒಂದು ಲಕ್ಷ ರೂಪಾಯಿ ಹಾಗೂ ಶಾಲು , ಸನ್ಮಾನ ,ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ