Latest

ಸೆ.24 ನನ್ನ ಜೀವನದಲ್ಲಿ ಮತ್ತೆ ನೆನೆಪಿಸಿಕೊಳ್ಳಲು ಇಚ್ಛಿಸದ ದಿನ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಪ್ರಕರನ ಸಂಬಂಧ ಸಿಸಿಬಿ ವಿಚಾರಣೆ ಎದುರಿಸಿದ್ದ ನಿರೂಪಕಿ ಅನುಶ್ರೀ, ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, 2020 ಸೆ.24 ನನ್ನ ಜೀವನದಲ್ಲಿ ಮತ್ತೆ ನೆನೆಪಿಸಿಕೊಳ್ಳಲು ಇಚ್ಚಿಸದ ದಿನ. 12 ವರ್ಷಗಳ ಹಿಂದೆ ಡಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಗೆದ್ದಿದ್ದೆ. ಆ ಗೆಲುವು ಇಂದು ಮುಳುವಾಗುತ್ತೆ ಎಂದುಕೊಂಡಿರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಈ ವೀಡಿಯೋವನ್ನು ನಾನು ನನ್ನನ್ನು ಸಮರ್ಥಿಸಿಕೊಳ್ಳಲು ಅಥವಾ ಕರುಣೆಗೋಸ್ಕರ ಮಾಡುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಸುತ್ತಮುತ್ತ ಹೇಳುತ್ತಿದ್ದಾರೆ. ಈ ಅಭಿಪ್ರಾಯಗಳು ನನ್ನ ಬಗ್ಗೆ ಇರುವುದರಿಂದ ಈ ವೀಡಿಯೋ ಮಾಡುತ್ತಿದ್ದೇನೆ ಎಂದಿದ್ದಾರೆ.

Home add -Advt

ಸಿಸಿಬಿ ನೋಟಿಸ್ ಬಂದಿರುವುದು ನನಗೆ ಬೇಜಾರಾಗಿಲ್ಲ. ಸಿಸಿಬಿ ಕಚೇರಿಗೆ ಹೋದ ಮಾತ್ರಕ್ಕೆ ನಾನು ಅಪರಾಧಿ ಅಥವಾ ಆರೋಪಿ ಅಂತ ಆಗುವುದಿಲ್ಲ. ಆ ವಿಚಾರದಲ್ಲಿ ನನ್ನನ್ನು ಬಿಂಬಿಸಿದ ರೀತಿ ನನಗೆ ತುಂಬಾ ನೋವುಂಟು ಮಾಡಿದೆ. ನೋವು ತುಂಬಾ ಸಣ್ಣ ಪದ. ಕಳೆದ ಒಂದು ವಾರದಿಂದ ನಮ್ಮ ಮನೆಯವರು ನೆಮ್ಮದಿ ಕಳೆದುಕೊಂಡಿದ್ದಾರೆ….ಆದರು ಕೂಡ ಈ ಕಷ್ಟಕಾಲದಲ್ಲಿ ಏನೂ ಹೆಳದೆ, ಏನೂ ಕೇಳದೆ ಅನುಶ್ರೀ ನೀವೇನು ಅಂತ ನಮಗೆ ಚೆನ್ನಾಗಿ ಗೊತ್ತು. ನಿಮ್ಮ ಮೇಲೆ ನಮಗೆ ಅಪಾರವಾದ ನಂಬಿಕೆ ಇದೆ ಅಂತ ನನ್ನ ಜೊತೆ ನಿಂತಿರುವ ಎಲ್ಲಾ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು ಎಂದಿದ್ದಾರೆ.

Related Articles

Back to top button