ತ್ರಿಶೂರ್ – ವಿದ್ಯಾರ್ಥಿನಿಯೊಬ್ಬಳನ್ನು ಅತ್ಯಾಚಾರಗೈದ ಆರೋಪದಲ್ಲಿ ಕೇರಳದ ತ್ರಿಶೂರಿನ ನಾಟಕ ಮತ್ತು ಕಲಾ ಕಾಲೇಜಿನ ಡೀನ್ ಸುನೀಲ್ ಕುಮಾರ ಅವರನ್ನು ಪಶ್ಚಿಮ ತ್ರಿಶೂರ್‌ನ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಕಾಲೇಜಿನ ನಾಟಕಶಾಲೆಯ ಪ್ರಥಮ ವರ್ಷದ ವಿದ್ಯಾರ್ಥಿನಿಯೊಬ್ಬಳು ಸುನೀಲ್ ಕುಮಾರ್ ತನ್ನಮೇಲೆ ಅತ್ಯಾಚಾರಗೈದಿದ್ದಾರೆ ಎಂದು ಆರೋಪಿಸಿದ್ದಾಳೆ. ಬಳಿಕ ನಾಟಕ ಶಾಲೆಯ ೫೫ ವಿದ್ಯಾರ್ಥಿಗಳು ಕಾಲೇಜಿನ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುನೀಲ್ ಕುಮಾರ್ ಅವರನ್ನು ಕಾಲೇಜಿನೊಳಗೆ ಪ್ರವೇಶಿಸದಂತೆ ಕಾಲೇಜು ಆಡಳಿತಮಂಡಳಿ ತಡೆದಿದೆ. ಬಳಿಕ ಪೊಲೀಸರು ಬಂಧಿಸಿ ಐಪಿಸಿ ಸೆಕ್ಷನ್ ೩೭೬, ೩೭೬(೨), ಮತ್ತು ೩೭೬-ಸಿ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.
ಪ್ರಕರಣದ ವಿವರ
ಸಂತ್ರಸ್ತ ಯುವತಿ ಆರೋಪ ಮಾಡಿರುವ ಪ್ರಕಾರ, ಕಳೆದ ೩-೪ ತಿಂಗಳ ಹಿಂದೆ ಕೋವಿಡ್ ಸೋಂಕು ಉಲ್ಬಣಗೊಂಡಾಗ ಹಾಸ್ಟೇಲ್ ಮುಚ್ಚಲಾಗಿತ್ತು. ಈ ವೇಳೆ ಸುನೀಲ್‌ಕುಮಾರ್ ಯುವತಿಯನ್ನು ತನ್ನ ಮನೆಯಲ್ಲಿ ಉಳಿದುಕೊಳ್ಳುವಂತೆ ಹೇಳಿದ್ದಾರೆ. ಆ ಪ್ರಕಾರ ಸುನೀಲ್ ಕುಮಾರ್ ಮನೆಯಲ್ಲಿ ಯುವತಿ ಆಶ್ರಯ ಪಡೆದಿದ್ದಾಳೆ. ಅಲ್ಲಿ ಸುನೀಲ್ ಕುಮಾರ್ ಜೊತೆ ಮತ್ತೊಬ್ಬ ವ್ಯಕ್ತಿ ಸಹ ಇದ್ದರು. ಮತ್ತೊಬ್ಬ ವ್ಯಕ್ತಿ (ರೂಂ ಪಾರ್ಟನರ್) ಇಲ್ಲದ ಸಮಯದಲ್ಲಿ ಸುನೀಲ್ ಕುಮಾರ್ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೇ ತನ್ನ ಮನೆ ಬಿಟ್ಟು ತೆರಳದಂತೆ ಗದರಿಸುತ್ತಿದ್ದರು. ಕಳೆದ ಜ.೨೧ರಂದು ಅತ್ಯಾಚಾರ ಮಾಡಿದರು.
ಇದರಿಂದ ನೊಂದ ವಿದ್ಯಾರ್ಥಿನಿ ಸುನೀಲ್‌ಕುಮಾರ್‌ನ ಮನೆಯಿಂದ ಹೊರ ಬಂದಿದ್ದಾಳೆ. ಅಲ್ಲದೇ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಈ ವೇಳೆ ಕೆಲವರು ವಿದ್ಯಾರ್ಥಿನಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಗೆ ಬಂದ ಸುನೀಲ್‌ಕುಮಾರ್ ಅತ್ಯಾಚಾರದ ಕುರಿತು ಯಾರಲ್ಲೂ ಬಾಯಿ ಬಿಡದಂತೆ ಮತ್ತೆ ಗದರಿಸಿದ್ದ.
ಆದರೆ ಮಾನಸಿಕವಾಗಿ ವಿಪರೀತ ನೊಂದಿದ್ದ ಯುವತಿ ಒತ್ತಡ ತಾಳಲಾರದೆ ಗೆಳತಿಯರಲ್ಲಿ ವಿಷಯ ಹೇಳಿದ್ದು ಅತ್ಯಾಚಾರದ ಪ್ರಕರಣ ಬೆಳಕಿಗೆ ಬಂದಿದೆ. ಸಹಪಾಠಿಗಳು ಆಕ್ರೋಶಗೊಂಡು ಕಾಲೇಜಿನ ಆಡಳಿತಮಂಡಳಿಗೆ ವಿಷಯ ತಿಳಿಸಿದ್ದು ಪೊಲೀಸ್ ದೂರು ದಾಖಲಾಗುವಂತಾಗಿದೆ.
ಸಿಬಿಐ ಅಧಿಕಾರಿಗಳ ಹೆಸರಿನಲ್ಲಿ ನಡೆಯಿತು ಸಿನಿಮಾ ರೀತಿಯ ದರೋಡೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ