Belagavi NewsBelgaum NewsKannada News

ಅನಧೀಕೃತ ನಳ ಸಂಪರ್ಕಕ್ಕೆ ಕಡಿತಗೊಳಿಸುವಿಕೆಗೆ ಚಾಲನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ನಗರದಲ್ಲಿ ಅನಧೀಕೃತ ನಳಗಳನ್ನು ಹೊಂದಿರುವ ಹಾಗೂ ನೀರಿನ ಕರ ಬಾಕಿ ಉಳಿಸಿಕೊಂಡವರ ನಳ ಸಂಪರ್ಕಗಳನ್ನು ಕಡಿತಗೊಳಿಸಲು ಆರಂಭಿಸಲಾಗಿದೆ.

ಬೇಸಿಗೆ ಆರಂಭವಾಗುತ್ತಲೇ ನಗರ ನೀರಿನ ಅಭಾವವನ್ನು ಎದುರಿಸುತ್ತಿದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಲು ಹಲವಾರು ಬಾರಿ ಮನವಿ ಮಾಡಲಾಗಿದೆ. ಅಲ್ಲದೇ ಅನಧೀಕೃತ ನಳಗಳನ್ನು ಅಧೀಕೃತಗೊಳಿಸಿಕೊಳ್ಳಲು ಮಾ.೩೧ ರವರೆಗೆ ಗಡವು ನೀಡಿದ್ದು, ಸಂಬಂಧಿಸಿದ ಅನಧೀಕೃತ ನಳ ಸಂಪರ್ಕದಾರರು ಕೂಡಲೇ ಅಧೀಕೃತಗೊಳಿಸಿಕೊಳ್ಳಲು ಮತ್ತೊಮ್ಮೆ ವಿನಂತಿಸಲಾಗಿದೆ.

ಒತ್ತಡ ಸಹಿತ ನೀರು ಸರಬರಾಜು ಆಗುತ್ತಿದ್ದರೂ, ಸಾರ್ವಜನಿಕರು ತಮ್ಮ ಮನೆ ನಳಕ್ಕೆ ನೀರು ಬಂದಾಗ ಮೋಟರ ಹಚ್ಚುತ್ತಿರುವುದು ಕಂಡುಬಂದಿದೆ. ಇದರಿಂದ ಬಡಾವಣೆಯ ಅಥವಾ ಪ್ರದೇಶದ ಕೊನೆಯಲ್ಲಿರುವ ಮನೆಗಳಿಗೆ ನೀರು ಸಿಗದಂತಾಗುತ್ತದೆ. ಕಾರಣ ಯಾರೂ ಕೂಡ ಮೋಟಾರ್ ಬಳಸಬಾರದೆಂದು, ಹಾಗೇನಾದರೂ ಮೋಟಾರ್ ಹಚ್ಚುವುದು ಕಂಡು ಬಂದಲ್ಲಿ ಮುಟ್ಟುಗೋಲು ಹಾಕಲಾಗುವುದು. ನೀರಿನ ಕರವನ್ನು ಕಾಲಕಾಲಕ್ಕೆ ಭರಿಸಬೇಕೆಂದು ಹಾಗೂ ಅನಧೀಕೃತ ನಳಗಳನ್ನು ಅಧೀಕೃತಗೊಳಿಸಿಕೊಳ್ಳಲು ಅಥವಾ ನೀರು ಸರಬರಾಜಿಗೆ ಸಂಬಂಧಿಸಿದಂತೆ ಸಮಸ್ಯೆಗಳಿದ್ದಲ್ಲಿ ಟೋಲ್ ಫ್ರಿ ನಂಬರ್ ೧೮೦೦೪೨೫೫೬೫೬ ಅಥವಾ ಕಚೇರಿ ದೂರವಾಣಿ ಸಂಖ್ಯೆ ೦೮೩೧-೨೪೬೨೯೩೩ ಸಂರ್ಕಿಸಬೇಕೆಂದು ಬೆಳಗಾವಿ ಕೆಯುಐಡಿಎಫ್‌ಸಿ-ಕುಸ್ಸೆಂಪ್, ಅಧೀಕ್ಷಕ ಅಭಿಯಂತರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Home add -Advt

Related Articles

Back to top button