ಕೃತಕ ಆಭರಣಗಳ ತಯಾರಿಕೆ ಹಾಗೂ ಕೋಳಿ ಸಾಕಾಣಿಕೆ ಅರ್ಜಿ ಅಹ್ವಾನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ವತಿಯಿಂದ ಕೃತಕ ಆಭರಣಗಳ ತಯಾರಿಕೆಯ((Costume Jewelry Udyami)) ೧೩ ದಿನಗಳ ತರಬೇತಿ ಮತ್ತು ಕೋಳಿ ಸಾಕಾಣಿಕೆ(Poultry) ೧೦ ದಿನಗಳ ತರಬೇತಿ ನೀಡಲು ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಅರ್ಹತೆಗಳು: ೧೮ ರಿಂದ ೪೫ ವಯಸ್ಸಿನವರಾಗಿರಬೇಕು, ಗಾಮೀಣ ಪ್ರದೇಶದವರಾಗಿರಬೇಕು, BPL/ಜಾಬ್ ಕಾರ್ಡ ಹೊಂದಿರಬೇಕು.
ದಾಖಲೆಗಳು: ಃPಐ/ ಜಾಬ್ ಕಾರ್ಡ, ಆಧಾರ ಕಾರ್ಡ,ಬ್ಯಾಂಕ ಪಾಸ್ ಬುಕ್ಕ, ೩ ಭಾವಚಿತ್ರಗಳುನ್ನು ಸಲ್ಲಿಸಬೇಕು. ತರಬೇತಿಯು ಊಟ ಮತ್ತು ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.
ತರಬೇತಿಗೆ ಅರ್ಜಿ ನೀಡುವವರು ಕೃತಕ ಆಭರಣಗಳ ತಯಾರಿಕೆ ಮತ್ತು ಕೋಳಿ ಸಾಕಾಣಿಕೆ, ಈ ಎರಡು ತರಬೇತಿಯಲ್ಲಿ ಒಂದು ತರಬೇತಿಗೆ ಅರ್ಜಿ ನೀಡುಬಹುದು.
ಜು. ೧೬ ೨೦೨೩, ರ ಒಳಗಾಗಿ ಅರ್ಜಿಯನ್ನು ಸಂಸ್ಥೆಯ ಅರ್ಜಿ ನಮೂನೆಯಲ್ಲಿ ಅಥವಾ ಬಿಳಿಹಾಳಿಯಲ್ಲಿ ನೇರವಾಗಿ ಕಾರ್ಯಾಲಯಕ್ಕೆ, ಪೋಸ್ಟ್ ಮುಖಾಂತರ ಅಥವಾ ಇಮೇಲ್ [email protected] ಗೆ ಕಳುಹಿಸಬಹುದಾಗಿದೆ.
ಬೆಳಗಾವಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಯುವಕರಿಗೆ, ನಿರುದ್ಯೋಗಿಗಳಿಗೆ, ಮತ್ತು ಮಹಿಳಾ ನಿರುದ್ಯೋಗಿಗಳಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿಯ ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ (ಸಿಬಿ ಆರ್ಸೆಟಿ), ಪ್ಲಾಟ ನಂ. ಸಿ ಎ-೦೩ (ಪಾರ್ಟ) ಕಣಬರ್ಗಿ ಇಂಡಸ್ಟ್ರಿಯಲ್ ಎರಿಯಾ, ಆಟೋ ನಗರ. – ೫೯೦೦೧೫ ಅಥವಾ ದೂರವಾಣಿ ಸಂಪರ್ಕ ಸಂಖ್ಯೆ: ೦೮೩೧-೨೪೪೦೬೪೪, ೮೨೯೬೭೯೨೧೬೬, ೯೮೪೫೭೫೦೦೪೩, ೮೮೬೭೩೮೮೯೦೬, ೮೦೫೦೪೦೬೮೬೬, ೯೪೪೯೮೬೦೫೬೪ ನಂ. ಗೆ ಬೆಳ್ಳಿಗ್ಗೆ ೯.೩೦ ರಿಂದ ಸಾಯಂಕಾಲ ೬. ಗಂಟೆ ವರೆಗೆ ಸಂಪರ್ಕಿಸಬಹುದು ಎಂದು ಬೆಳಗಾವಿಯ ಕೆನರಾ ಬ್ಯಾಂಕ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.